ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲು ಪಾಲಾಗಿರುವ ದರ್ಶನ್‌ರವರ ಜಾಮೀನಿನ ಅರ್ಜಿಯ ವಿಚಾರಣೆಯನ್ನು ಬೆಂಗಳೂರಿನ 57 ನೇ ಸಿಸಿಎಚ್ ಕೋರ್ಟಿನಲ್ಲಿ ಮುಂದುವರೆದಿದ್ದು, ನಟ ದರ್ಶನ್ ಪರ ವಕೀಲರಾದ ಸಿ.ವಿ.ನಾಗೇಶ್ ವಾದವನ್ನು ಮಂಡಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ನಗರದ 57 ಸಿಸಿಎಚ್ ಕೋರ್ಟಿನ ನ್ಯಾ.ಜೈಶಂಕರ್ ಪೀಠದಲ್ಲಿ ಜಾಮೀನಿನ ಅರ್ಜಿ ವಿಚಾರನೆ ನಡೆಯುತ್ತಿದ್ದು, ಈ ವಿಚಾರಣೆಯನ್ನು ಮಧ್ಯಾಹ್ನಕ್ಕೆ ಮುಂದೂಡಲಾಗಿತ್ತು.ಕೋರ್ಟಿನಲ್ಲಿ ಪರ-ವಿರೋದದ, ವಾದ-ಪ್ರತಿವಾದಗಳ ನಡೆಯುತ್ತಿದ್ದು, ನಟನ ಪರ ವಾದ ಮಾಡುತ್ತಿರುವ ವಕೀಲರು ಪ್ರಬಲವಾದ ವಾದವನ್ನು ಮಂಡಿಸುತ್ತಿದ್ದಾರೆ.
ನಟ ದರ್ಶನ್ ವಿರುದ್ದವಿರುವ ಎಲ್ಲಾ ಸಾಕ್ಷ್ಯಗಳು ಫ್ಯಾಬ್ರಿಕೇಟಿಡ್ ಆಗಿದ್ದು ಅವರನ್ನು ಬೇಕಂತಲೇ ಕೊಲೆ ಪ್ರಕರಣದಲ್ಲಿ ಸಿಲುಕಿಸುವ ಪ್ಲಾನ್ ನಡೆದಿದೆ. ಸದ್ಯ ಎಸ್‌ಪಿಪಿ ಪ್ರಸನ್ನ ಕುಮಾರ್ ರವರು ಕೋರ್ಟಿನಲ್ಲಿ ಅಕ್ಷೇಪಣೆಯನ್ನು ಮಾಡಿದ್ದಾರೆ ಎನ್ನಲಾಗಿದ್ದು ದರ್ಶನ್‌ರವರಿಗೆ ಬೇಲ್ ಸಿಗುತ್ತಾ ಇಲ್ಲವಾ ಎಂಬುದನ್ನು ಕಾದುನೋಡೋಣ.