ಬಳ್ಳಾರಿ: ಬಳ್ಳಾರಿ ಜೈಲಿನಲ್ಲಿ ಮೃತರೇಣುಕಾಸ್ವಾಮಿ ಆತ್ಮ ದರ್ಶನ್‌ರವರಿಗೆ ಕಾಡುತ್ತಿದೆಯಂತೆ ಎಂಬ ಸುದ್ದಿಯೂ ಬಳ್ಳಾರಿ ಜೈಲಿನ ಮೂಲಗಳು ತಿಳಿಸಿವೆ ಎಂದು ತಿಳಿದುಬಂದಿದೆ.
ಜೈಲಿನ ಮೂಲಗಳ ಪ್ರಕಾರ ಪರಪ್ಪನ ಅಗ್ರಹಾರದಿಂದ ಸ್ಥಳಾಂತರಿಸಿದ ಬಳಿಕ ಸಣ್ಣದೊಂದು ಸೆಲ್‌ನಲ್ಲಿ ಪ್ರತ್ಯೇಕವಾಗಿ ಬಂಧಿಸಿರುವುದು ಇದಕ್ಕೆ ಕಾರಣವಾಗಿದ್ದು ಒಬ್ಬಂಟಿಯಾಗಿರುವ ದರ್ಶನ್‌ರವರಿಗೆ ನಿದ್ದೆ ಬರದೆಯಿರುವುದರಿಂದ ಈ ಪರಿಸ್ಥಿತಿ ಬಂದಿರಬಹುದೆಂದು ಊಹಿಸಲಾಗಿದೆ.
ಸಣ್ಣ ಸೆಲ್‌ನಲ್ಲಿ ಒಬ್ಬಂಟಿಯಾಗಿರುವ ದರ್ಶನ್‌ಗೆ ಕೆಟ್ಟ ಕನಸುಗಳು ಬಿದ್ದಿದ್ದವು.ಭಯದಿಂದ ಮಲಗಲು ಸಾದ್ಯವಾಗುತ್ತಿಲ್ಲ ಎಂದು ಜೈಲಧಿಕಾರಿಗಳ ಜೊತೆಯಲ್ಲಿ ಮಾತನಾಡಿದ್ದಾರೆ. ಮುಂಜಾನೆ ಸಮಯದಲ್ಲಿ ನಿದ್ದೆ ಮಾಡಬೇಕಾದರೆ ಯಾರೋ ಕಿರುಚುವುದು, ಕೂಗಿಕೊಳ್ಳುವ ಶಬ್ಧಗಳು ಕೇಳಿಸುತ್ತವೆ ಎಂದು ಹೇಳಿದ್ದರು ದರ್ಶನ್ ಎಂದು ಮೂಲಗಳು ತಿಳಿಸಿವೆ.