ಬೆಂಗಳೂರು:ಸಿದ್ದರಾಮಯ್ಯವರನ್ನು ಕಂಡರೆ ನನಗೆ ಭಯ ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಸಿದ್ದರಾಮಯ್ಯನವರನ್ನು ಕಂಡರೆ ಭಯ ಬೀಳಲು ಅವರು ದೆವ್ವನಾ? ಅಥವಾ ಭೂತನಾ? ಎಂದು  ತಿರುಗೇಟನ್ನು ನೀಡಿದ್ದಾರೆ.

ಹೆಚ್.ಡಿ.ಕೆಗೆ ಸಿದ್ದರಾಮಯ್ಯನವರನ್ನು ಕಂಡ್ರೆ ಭಯ ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ನನಗೆ ಯಾರನ್ನು ಕಂಡರೂ ಭಯವಾಗುವುದಿಲ್ಲ ಸಿದ್ದರಾಮಯ್ಯನಂತವರು ಲಕ್ಷ ಜನ ಬಂದ್ರೂ ಭಯಪಡುವುದಿಲ್ಲ. ನನ್ನನ್ನು ಭಯ ಪಡಿಸಲು ಯಾರಿಗೂ ಸಾದ್ಯವಿಲ್ಲವೆಂದಿದ್ದಾರೆ.

ಸಿದ್ದರಾಮಯ್ಯನಂತಹವರು ಎಷ್ಟೇ ಜನ ಬಂದರೂ ಎದುರಿಸುತ್ತೇನೆ , ನಾನೇನು ಸಿದ್ದರಾಮಯ್ಯನ ಮುಖಾಂತರ ರಾಜಕೀಯಕ್ಕೆ ಬಂದಿದ್ದೀನಾ? ನನ್ನ ಶ್ರಮದಿಂದ , ಸ್ವಂತ ದುಡಿಮೆಯಿಂದ, ಕಾರ್ಯಕರ್ತರ ದುಡಿಮೆಯಿಂದ ಬಂದಿದ್ದೇನೆ. ಸಿದ್ರಾಮಯ್ಯನ ಹೆಸರಲ್ಲಿ ನಾನು ರಾಜಕೀಯ ಮಾಡಲ್ಲ. ಬದಲಾಗಿ ಸಿದ್ದರಾಮಯ್ಯನವರೇ ಜೆಡಿಎಸ್‌ ಪಕ್ಷದ ಕಾರ್ಯಕರ್ತರು.ನಮ್ಮಪ್ಪನ (ಹೆಚ್.ಡಿ.ದೇವೇಗೌಡರ) ನೆರಳಲ್ಲಿ ಸಿದ್ದರಾಮಯ್ಯ ಬಂದಿರುವುದು ಎಂದು ಕಿಡಿಕಾರಿದ್ದಾರೆ.

ಮುಡಾ ವಿಚಾರವನ್ನು ಮರೆಮಾಚಲು ನಿಮ್ಮ ಮೇಲೆ ಎಫ್‌ಐಆರ್‌ ಆಗಿದಿಯಾ ಎಂಬ ವಿಚಾರದ ಕುರಿತು ಮಾತನಾಡಿದ ಅವರು,ಕಾಂಗ್ರೆಸ್‌ ಸರ್ಕಾರವೇ ಎಲ್ಲ ವಿಷಯಗಳನ್ನು ಡೈವರ್ಟ್‌ ಮಾಡಲು ಯತ್ನಿಸ್ತಾರೆ. ಈ ಸರ್ಕಾರದವರಿಗೆ ಭಯವಿಲ್ಲ, ಭಕ್ತಿಯೂ ಇಲ್ಲ, ಗೌರವವಂತೂ ಮೊದಲೇ ಇಲ್ಲ ಎಲ್ಲವನ್ನೂ ಬಿಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

Leave a Reply

Your email address will not be published. Required fields are marked *