ಬೆಂಗಳೂರು:ಸಿಎಂ ಸಿದ್ದರಾಮಯ್ಯನವರು ಆಪಾದಿತರು? ನಾನು ಆರೋಪ ಮುಕ್ತ ಎಂದು ಆರ್.ಅಶೋಕ್ ಸಿದ್ದರಾಮಯ್ಯನವರ ವಿರುದ್ದ ವಾಗ್ದಾಳಿಯನ್ನು ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಾಲಯವೂ ನನ್ನನ್ನು ʼಆರೋಪ ಮುಕ್ತʼ ಎಂದಿದೆ ಆದರೆ, ಸಿಎಂ ಸಿದ್ದರಾಮಯ್ಯನವರು ಅವರ ಮೇಲಿರುವ ಆರೋಪಗಳಿಂದ ಮುಕ್ತರಾಗಿಲ್ಲ. ಆದ್ದರಿಂದ ಅವರು ತನಿಖೆಯನ್ನು ಎದುರಿಸಬೇಕಾಗುತ್ತದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ತಿಳಿಸಿದ್ದಾರೆ.
ನಾನು ಭೂಮಿಯನ್ನು ಅಕ್ರಮವಾಗಿ ಸಂಪಾದಿಸಿದ್ದೇನೆಂದು ಕಾಂಗ್ರೆಸ್ಪಕ್ಷದ ನಾಲ್ಕು ಜನ ಸಚಿವರು ನೈತಿಕತೆಯ ಪ್ರಶ್ನೆಯನ್ನು ಎತ್ತಿರುವುದು ಶೋಚನೀಯ. ಅವರ ಪಕ್ಷದವರ ರೀತಿ ನ್ಯಾಯಾಲಯದ ತೀರ್ಪನ್ನು ಬಚ್ಚಿಟ್ಟು, ಹುಸಿ ಸುಳ್ಳುಗಳನ್ನು ಹೇಳುವುದರ ಮೂಲಕ ತಾವು ನಿರ್ದೊಷಿಗಳೆಂದು ಸಾಬೀತು ಮಾಡಲು ಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಸಿಎಂ ಸಿದ್ದರಾಮಯ್ಯನವರ ಪತ್ನಿಗೆ ಅರಿಶಿಣ ಕುಂಕುಮಕ್ಕೆ ಬಂದಿರುವ ಭೂಮಿಯಾಗಿದೆ ಆದರೆ ನಾನು ದುಡ್ಡು ಕೊಟ್ಟು ಭೂಮಿಯನ್ನುಖರೀದಿಸಿದ್ದೇನೆ ಈ ಮುಡಾ ಹಗರಣದ ಆರೋಪ ಬಂದೊರಗಿದಾಗ ಯುಪಿಎ ಸರ್ಕಾರ ನೇಮಿಸಿರುವ ರಾಜ್ಯಪಾಲರು ಈ ಪ್ರಕರಣವನ್ನು ತನಿಕೆಗೆ ಒಳಪಡಿಸಲಿಲ್ಲ ಎಂದು ಆರ್. ಅಶೋಕ್ ಹೇಳಿದ್ದಾರೆ.