ಅಮೇಠಿ: ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಸುನೀಲ್ ಎಂಬುವವರ ಕುಟುಂಬದವರಿಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿರುವ ಘಟನೆಯು ಗುರುವಾರ ರಾತ್ರಿ ಉತ್ತರ ಪ್ರದೇಶದ ಅಮೇಠಿ ಜಿಲ್ಲೆಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಅಮೇಠಿ ಜಿಲ್ಲಾ ಕೇಂದ್ರದಿಂದ 60 ಕಿ.ಮೀ ದೂರದಲ್ಲಿರುವ ಪಾನಹುನಾ ಎಂಬಲ್ಲಿ ಸುನೀಲ್ (35) ರವರು ಸರ್ಕಾರಿ ಶಾಲಾಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದು ಅದೇ ಊರಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ಸುನೀಲ್ (35), ಪೂನಮ್ (32) ,ದೃಷ್ಟಿ (6) ,ಮತ್ತು ಒಂದು ವರ್ಷದ ಗಂಡು ಮಗು. ವಾಸವಾಗಿತ್ತೆಂದು ತಿಳಿದುಬಂದಿದೆ.
ನೆನ್ನ ರಾತ್ರಿ (‘ಗುರುವಾರ ರಾತ್ರಿ) ಅವರ ಮನೆಯಿಂದ ಬಂದೂಕಿನ ಸದ್ದು ಕೇಳಿದ ಕೂಡಲೇ ನೆರೆಹೊರೆಯವರು ಸ್ಥಳಕ್ಕೆ ಧಾವಿಸಿ ಬಂದು ವಿಕ್ಷೀಸಿದಾಗ ಆ ನಾಲ್ಕು ಜನರೂ ರಕ್ತದ ಮಡುವಿನಲ್ಲೇ ಸಾವನಪ್ಪಿರುವುದು ತಿಳಿದಬಂದಿದೆ. ಈ ಹತ್ಯೆಯನ್ನು ಎಸಗಿದವರು ಸುನೀಲ್ ಕುಟುಂಬಕ್ಕೆ ಚಿರಪರಿಚಿತರಾದವರೇ ಮಾಡಿದ್ದಾರೆಂದು ಶಂಕೆ ಮೂಡಿದೆ. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಹತ್ಯೆಗೆ ಕಾರಣರಾದ ದುಷ್ಕರ್ಮಿಗಳ ಪತ್ತೆಗೆ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ’ ಎಂದು ಅಮೇಠಿಯ ಎಸ್ಪಿ ಅನೂಪ್ ಕುಮಾರ್ ಸಿಂಗ್ ತಿಳಿದ್ದಾರೆ.