ರಾಯಚೂರು: ಹೆಚ್ ಡಿ ಕುಮಾರಸ್ವಾಮಿಯವರಿಗೆ ಮಾತನಾಡಲು ಯಾವ ವಿಷಯವಿಲ್ಲದಿದ್ದರೂ ಕೂಡಾ ಬಾಯಿಗೆ ಬಂದಂತಹ ಹೇಳಿಕೆಗಳನ್ನು ನೀಡುತ್ತಾ ಅರೆ ಹುಚ್ಚರಂತೆ ಏನೇನೊ ಬಡಬಡಿಸ್ತಿದ್ದಾರೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾರ್ವತಿ ಸಿದ್ದರಾಮಯ್ಯನವರು 14 ಮುಡಾ ನಿವೇಶನಗಳನ್ನು ಹಿಂದಿರುಗಿಸಿದ ಮೇಲೆ ಕುಮಾರಸ್ವಾಮಿಯವರಿಗೆ ಮಾತನಾಡಲು ಯಾವ್ದೆ ವಿಷಯವಿಲ್ಲದ ಕಾರಣ ಹುಚ್ಚು ಹಿಡಿದವರಂತೆ ಏನೇನೊ ಹೇಳಿಕೆಗಳನ್ನು ನೀಡುತ್ತಿರುತ್ತಾರೆ ಎಂದು ಹೆಚ್.ಡಿ.ಕೆ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಮುಡಾ ಹಗರಣದ ಪ್ರಕರಣದಿಂದ ದ್ವೇಷದ ರಾಜಕೀಯ ನಡೆಯುತ್ತಿದೆ, ಇದರಿಂದ ನನ್ನ ಪತಿಗೆ ತೊಂದರೆಯಾಗುತ್ತದೆ ಎಂದು ಮನನೊಂದ ಪಾರ್ವತಿ ಸಿದ್ದರಾಮಯ್ಯನವರು ನಾನು ಆತ್ಮಸಾಕ್ಷಿಯಾಗಿ ನಡೆದುಕೊಳ್ಳುತ್ತೇನೆ ಎಂದು ಮುಡಾ ಸೈಟುಗಳನ್ನು ಹಿಂದುರಿಗಿಸುತ್ತಾರೆ. ವಿರೋಧ ಪಕ್ಷದ ನಾಯಕರಾದವರಿಗೆ ಬದ್ಧತೆಯಿರಬೇಕು, ಇವರಿಗೆ ಯಾವ ರೀತಿಯ ಜವಾಬ್ದಾರಿಯಿದೆ. ಇವರಾಡುವ ಮಾತಿಗೆ ಸಾಸಿವೆ ಕಾಳಿನಷ್ಟೂ ಬೆಲೆಯಿಲ್ಲವೆಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.