ಮುಡಾ ಹಗರಣವೂ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು ಇದೀಗ ಮುಡಾ ಹಗರಣದಲ್ಲಿ ಕೇವಲ 14 ನಿವೇಶನಗಳ ಅಕ್ರಮ ನಡೆದಿರುವುದಲ್ಲ, ಬದಲಾಗಿ 4500 ನಿವೇಶಗಳ ಅಕ್ರಮ ನಡೆದಿದೆ ಎಂದು ಬಿಜೆಪಿ ಶಾಸಕರಾದ ಶ್ರೀವತ್ಸ ಸ್ಪೋಟಕ ಹೇಳಿಕೆನ್ನು ನೀಡಿದ್ದಾರೆ.

ಮುಡಾ ಹಗರಣದಲ್ಲಿ ಬರೀ 14 ಸೈಟುಗಳ ಅಕ್ರಮ ನಡೆದಿರುವುದಲ್ಲ, ಸುಮಾರು 4500 ನಿವೇಶನಗಳ ಅಕ್ರಮ ನಡೆದಿದೆ. ಈ ವಿಚಾರವಾಗಿ ತನಿಖೆ ನಡೆಸಬೇಕೆಂದು ಆಗ್ರಹ ಮಾಡಿದ್ದಾರೆ.

ನಮ್ಮ ಪಕ್ಷದವರು ತಪ್ಪು ಮಾಡಿದರೆ ಅವರನ್ನು ತನಿಖೆ ಮಾಡಲಿ, ತನಿಖೆ ನಡೆಸುವಾಗ ಪಕ್ಷಗಳ ಭೇದಭಾವ ಮಾಡಬಾರದು ಮುಕ್ತವಾಗಿ ತನಿಖೆ ಮಾಡಲಿ, ಆಪಕ್ಷ ಈಪಕ್ಷ ಎನ್ನದೆ ತನಿಖೆ ನಡೆಸಲಿ ಎಂದಿದ್ದಾರೆ. ಇದೇ ಸಮಯದಲ್ಲಿ ದಸರಾ ಉದ್ಘಾಟನಾ ಸಮಾರಂಭದ ವೇಳೆ ಹಂಪನ ನಾಗರಾಜ್‌ರವರು ರಾಜಕೀಯದ ಬಗ್ಗೆ ಮಾತನಾಡಬಾರದಿತ್ತು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *