ಬೆಂಗಳೂರು: ಪೊಲೀಸ್ ಇನ್ಸ್ ಪೆಕ್ಟರ್ ವಿರುದ್ದವೇ ಜೆಪಿ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವ ಘಟನೆಯು ಬೆಂಗಳೂರಿನ ರಾಜಧಾನಿಯಲ್ಲಿ ನಡೆದಿದೆ.
ಹೀತೆಂದ್ರ ಎಂ.ಎಸ್ ಎನ್ನುವವರು ವಶಪಡಿಸಿಕೊಂಡಿರುವ ವಸ್ತುಗಳನ್ನು ಸಂಬಂಧಪಟ್ಟವರಿಗೆ ಹಿಂದಿರುಗಿಸದೆ ದುರುಪಯೋಗ ಮಾಡಿಕೊಂಡಿರುವ ಆರೋಪದ ಮೇಲೆ ದೂರನ್ನು ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯು ಜಪ್ತಿ ಮಾಡಿದಂತಹ ವಸ್ತುಗಳನ್ನು ಹಿಂದಿರುಗಿಸಲು ಪತ್ರವನ್ನು ಕೂಡಾ ನೀಡಿದ್ದರು.ಹಾಗಾಗಿ ಜಪ್ತಿ ಮಾಡಿರುವ ಮಾಲನ್ನು ವಾಪಸ್ ಮಾಡದೇ ಇರುವ ಕಾರಣಕ್ಕಾಗಿ ಇನ್ಸ್ ಪೆಕ್ಟರ್ ವಿರುದ್ದ ಜೆಪಿ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎನ್ನಲಾಗಿದೆ.