ಬೆಂಗಳೂರು : ಸಿಎಂ ಸಿದ್ದರಾಮಯ್ಯ ಯಾವ ಕಾರಣಕ್ಕೆ ರಾಜೀನಾಮೆ ನೀಡಬೇಕು ?ಎಂದು ಬಿಜೆಪಿ ಶಾಸಕ ಎಸ್.ಟಿ,ಸೋಮಣ್ಣ ಸಿದ್ದರಾಮಯ್ಯನವರ ಪರ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಶೇಖರ್ , ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯನವರು ರಾಜೀನಾಮೆ ನೀಡಬೇಕೆಂದು ಬಿಜೆಪಿ ಪಕ್ಷದ ನಾಯಕರು ಆಗ್ರಹಿಸುತ್ತಿದ್ದು ತರಾವರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೀಗ ಬಿಜೆಪಿ ಪಕ್ಷದ ಶಾಸಕ ಎಸ್.ಟಿ. ಸೋಮಶೇಖರ್ ಅವರು ಸಿಎಂ ಸಿದ್ದರಾಮಯ್ಯ ಯಾವ ಕಾರಣಕ್ಕೆ ರಾಜೀನಾಮೆ ಕೊಡಬೇಕು? ಎಂದು ಸ್ವಪಕ್ಷದವರ ವಿರುದ್ದವೇ ಧ್ವನಿಯೆತ್ತಿದ್ದಾರೆ.
ಸಿಎಂ ಸಿದ್ದರಾಮಯ್ಯನವರು ಯಾವ ಕಾರಣಕ್ಕೆ ರಾಜೀನಾಮೆ ನೀಡಬೇಕು. ಬಿಜೆಪಿ ಪಕ್ಷದ ನಾಯಕರು ಯಾವಗ್ಲಾದರೂ,ಯಾವತ್ತಾದರೂ ಅಭಿವೃದ್ಧಿಯ ಬಗ್ಗೆ ಯೋಚಿಸುತ್ತಾರಾ? ಮುಡಾ ಹಗರಣವೂ ಕೇವಲ ಸಿಎಂ ವಿರುದ್ದ ಬ್ಯಾಟಿಂಗ್ ಮಾಡಲು ದಾಳವಾಗಿಸಿದ್ದಾರೆ. ಸಿಎಂ ವಿರುದ್ಧ ರಾಜಕೀಯವಾಗಿ ದಾಳಿಯನ್ನು ಮಾಡುತ್ತಿದ್ದಾರೆ , ಎಂದು ಸ್ವಪಕ್ಷದ ವಿರುದ್ದ ಕಿಡಿಕಾರಿದ್ದಾರೆ.