ಅಭಿಮಾನಿಗಳು ಕೂತೂಹಲದಿಂದ  ಕಾಯುತ್ತಿದ್ದ ಬಹುನಿರೀಕ್ಷಿತ ಕನ್ನಡ ರಿಯಾಲಿಟಿ ಶೋ  ಆಂದರೆ ಬಿಗ್​ಬಾಸ್ ​​ರಿಯಾಲಿಟಿ ಶೋ. ನಟ ಕಿಚ್ಚಸುದೀಪ್ ನಿರೂಪಣೆಯಲ್ಲಿಯೇ ಬಿಗ್‌ಬಾಸ್‌ 11 ಕೂಡಾ ಮೂಡಿ ಬರುತ್ತಿದೆ. ಈ ಕಾರ್ಯಕ್ರಮವೂ ಎಲ್ಲಾ ಕಾರ್ಯಕ್ರಮದ ಟಿ.ಆರ್‌.ಪಿ ಯನ್ನೂ ಹಿಂದಿಕ್ಕುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರೆ ತಪ್ಪಾಗಲಾರದು.

ಬಿಗ್‌ಬಾಸ್‌ ರಿಯಾಲಿಟಿ ಶೋವನ್ನು ನೋಡಲು ಜನ ಕೂತೂಹಲದಿಂದ ಕಾಯುತ್ತಿದ್ದು ಅವರನು ಬೂಸ್ಟ್‌ ಮಾಡಲು ಈಗಾಗಲೇ ಬಿಗ್‌ಬಾಸ್‌ ಮನೆಗೆ 17 ಮಂದಿ ಎಂಟ್ರಿಯಾಗಿದ್ದಾರೆ.

ಎಂಟ್ರಿಯಾದ ಸ್ಪರ್ಧಿಗಳೆಲ್ಲರೂ ತಮ್ಮ ತಮ್ಮ ಪರಿಚಯವನ್ನು ಮಾಡಿಕೊಳ್ಳುತೊಡಗಿದ್ದಾರೆ. ಈಗಾಗಲೇ ನಾವು ದೃಶ್ಯದಲ್ಲಿ ವಿಕ್ಷೀಸಿದಂತೆ ಬಿಗ್​ ಬಾಸ್​ ಮನೆಯೊಳಗಡೆ  ಸ್ವರ್ಗ ಮತ್ತು ನರಕ ಎಂದು ಎರಡು ಗುಂಪುಗಳನ್ನಾಗಿ ಮಾಡಲಾಗಿದ್ದು  ʼಸ್ವರ್ಗʼದ ಭಾಗದಲ್ಲಿ  ಜಗದೀಶ್.ಹಂಸಾ.ತ್ರಿವಿಕ್ರಮ್‌,  ಭವ್ಯ, ಧನರಾಜ್​, ಯಮುನಾ, ಧರ್ಮ .ಗೌತಮಿ, ಐಶ್ವರ್ಯಾ, ಮತ್ತು ಮಂಜು ಎಂಬುವವರಿದ್ದಾರೆ.

ʼನರಕʼ ಭಾಗದಲ್ಲಿ ಅನುಷಾ, ಗೋಲ್ಡ್​​ ಸುರೇಶ್​, ಶಿಶಿರ್​, ಮೋಕ್ಷಿತಾ, ರಂಜಿತ್ ಮಾನಸಾ, ಚೈತ್ರಾಕುಂದಾಪುರವರಿದ್ದು ತಮ್ಮ ತಮ್ಮ ಪರಿಚಯ ಮಾಡಿಕೊಂಡಿದ್ದು ಜಗದೀಶ್‌ರವರು ಚೈತ್ರಾ ಕುಂದಾಪುರರವರನ್ನು ಪರಿಚಯ ಮಾಡಿಕೊಳ್ಳುವ ಸಮಯದಲ್ಲಿ ನೀವೂ ಲೇಡಿ ಡಾನ್‌, ನಾನು ಮೆಲ್‌ ಡಾನ್‌ ಎಂದು ಹಾಸ್ಯ ಮಾಡಿದ್ದಾರೆ.

ಸತ್ಯ ಎಂಬ ಧಾರಾವಾಹಿಯಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಗೌತಮಿಯ ಹೊಸ ಅಧ್ಯಾಯ ಶುರುವಾಗುತ್ತದೆ ಎಂದಿರುವುದರ ಕಾರಣವೇನು ಎಂಬುದನ್ನು ಕಾದು ನೋಡೋಣ.

Leave a Reply

Your email address will not be published. Required fields are marked *