ಬೆಂಗಳೂರು : ಮುಡಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜಕೀಯ ನಾಯಕರ ನಡುವೆ ವಾಕ್ಸಮರ ಶುರುವಾಗಿದ್ದು ನನ್ನ ಹತ್ತಿರವಿರುವ ದಾಖಲೆಗಳನ್ನು ಬಿಡುಗಡೆ ಮಾಡಿದ್ರೆ 5ರಿಂದ 6  ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಮತ್ತೊಂದು ಬಾಂಬ್‌ ಸಿಡಿಸಿರುವುದು ಇಡೀ ರಾಜಕೀಯವಲಯದಲ್ಲಿ ಸಂಚಲನವನ್ನು ಉಂಟುಮಾಡಿದೆ.

ಜೆ.ಪಿ.ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , ನನ್ನನ್ನು ಜೈಲಿನ ಪಾಲು ಮಾಡಲು ಸರ್ಕಾರ ಹುನ್ನಾರಗಳನ್ನುಮಾಡುತ್ತಿದೆ. 12 ವರ್ಷದ ಹಿಂದಿನ ಹಳೆಯ ಕೇಸಲ್ಲಿ ಜೈಲಿಗೆ ಕಳಿಸಲು ಪ್ರಯತ್ನಿಸಿದರೆ ಆ ಪ್ರಯತ್ನ ವಿಫಲ. ನಾನು ರಾಜೀನಾಮೆ ನೀಡುವ ಪರಿಸ್ಥಿತಿ ಬಂದೊದಗಿದರೆ ಖಂಡಿತ ನಾನೇ ರಾಜೀನಾಮೆ ನೀಡುತ್ತೇನೆ.ಅದನ್ನು ಬಿಟ್ಟು ಇಲ್ಲಸಲ್ಲದ ಪಿತೂರಿಗಳನ್ನು ನಡೆಸಿ ನನ್ನ ಕಣ್ಣಲ್ಲಿ ನೀರನ್ನು ಹಾಕಿಸಿದರೆ ಅವರು ನಾಶವಾಗಿ ಹೋಗ್ತಾರೆ, ಈಗಾಗಲೇ ಕಾಂಗ್ರೆಸ್‌ಗೆ ಆ ಗತಿ ಬಂದಿದೆ ಎಂದು ಸಿಎಂ ಮತ್ತು ಕಾಂಗ್ರೆಸ್‌ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ನಂತರ ಎಸ್‌ಐಟಿ ಮುಖ್ಯಸ್ಥ ಎಡಿಜಿಪಿ ಚಂದ್ರಶೇಖರ್ ವಿರುದ್ಧವೂ ಎಫ್‌ ಐ ಆರ್‌ ಆಗಿದೆ. ಆ ವಿಚಾರದ ಕುರಿತು ತನಿಖೆ ನಡೆಯಬೇಕು ಎಂದಿದ್ದಾರೆ.

Leave a Reply

Your email address will not be published. Required fields are marked *