ಬೆಂಗಳೂರು: ಕ್ರೇಜಿ ಕ್ವೀನ್ ಎಂಬ ಬಿರುದಿಗೆ ರಾಯಬಾರಿಯಾಗಿರುವ ರಕ್ಷಿತಾ ಪ್ರೇಮ್‌ರವರು “ಅಪ್ಪು” ಸಿನಿಮಾದ ಮೂಲದ ಸ್ಯಾಂಡಲ್‌ವುಡ್ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದರು. ಪ್ರಸ್ತುತ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಕಾರ್ಯವನ್ನು ನಿರ್ವಹಿಸುತ್ತಿರುವ ಇವರು ಡಿಕೆಡಿ ವೇದಿಕೆಯಲ್ಲಿ ನಟ ದರ್ಶನ್ ವಿಚಾರವನ್ನು ಮಾತನಾಡಿದ್ದಾರೆ.
ಮಹಾನಟಿ ರನ್ನರ್ ಆಪ್ ಆಗಿರುವ ಗಗನಾ ನಟ ದರ್ಶನ್‌ರವರಿಗೆ ಪಕ್ಕಾ ಅಭಿಮಾನಿಯಾಗಿದ್ದು ನಟ ದರ್ಶನ್, ರಕ್ಷಿತಾ ಪ್ರೇಮ್ ಮದುವೆಯಾಗಿದ್ದರೆ ಎಂದುಕೊಂಡಿದ್ದೆ ಆದರೆ ಪ್ರೇಮ್‌ರವರನ್ನು ಮದುವೆ ಯಾಗಿದ್ದಾರೆ ಎನ್ನುವ ವಿಷಯವನ್ನು ಹೇಳುತ್ತಿದ್ದಂತೆ ನಟಿ ರಕ್ಷಿತಾ ಪ್ರೇಮ್‌ರವರು ಹೀಗೆ ಮಾತನಾಡಿದ್ದಾರೆ.
ದರ್ಶನ್ ಅಪ್ಪ-ಅಮ್ಮ ಮತ್ತು ನಮ್ಮ ಅಪ್ಪ-ಅಮ್ಮನಿಗೆ ನಮ್ಮಿಬ್ಬರಿಗೆ ಮದುವೆ ಮಾಡುವ ಆಸೆಯಿತ್ತು ಎಂದಿದ್ದಾರೆ.