ನವದೆಹಲಿ: ದೇಶದಲ್ಲಿ ಬುಲ್ಡೋಜರ್‌ನ್ನು  ಬಳಸಿಕೊಂಡು ಯಾವುದೇ ಆಸ್ತಿ-ಪಾಸ್ತಿಯನ್ನು ನೆಲಸಮ ಮಾಡುವಂತಿಲ್ಲವೆಂದು ಸುಪ್ರೀಂ ಕೋರ್ಟ್ ಇಂದು(ಮಂಗಳವಾರ) ಮಧ್ಯಂತರ ತಡೆಯನ್ನು  ನೀಡಿದೆ ಎಂದು ತಿಳಿದುಬಂದಿದೆ.

ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರ ನ್ಯಾಯಪೀಠವು ಅಪರಾಧಗಳ ಆರೋಪವಿರುವ ವ್ಯಕ್ತಿಗಳ ಆಸ್ತಿ-ಪಾಸ್ತಿ ಮತ್ತು ಕಟ್ಟಡಗಳನ್ನು ನೆಲಸಮ ಮಾಡಿರುವ  ವಿವಿಧ ರಾಜ್ಯ ಸರ್ಕಾರಗಳ ಕ್ರಮವನ್ನು ಪ್ರಶ್ನಿಸಿ ನೀಡಲಾಗಿರುವ ಅರ್ಜಿಯಲ್ಲಿ ಈ ನಿರ್ದೇಶನವನ್ನು ನೀಡಿದೆ ಈ ತಡೆಯಾಜ್ಞೆಯು ಅಕ್ಟೋಬರ್‌ 1ರವರೆಗೆ ಇರುತ್ತದೆ ಎನ್ನಲಾಗಿದೆ..

Leave a Reply

Your email address will not be published. Required fields are marked *