ಕಲಬುರ್ಗಿ: ಕಾಂಗ್ರೆಸ್ ಪಕ್ಷದ ನಾಯಕರ ಷಡ್ಯಂತ್ರದಿಂದ ಬಿಜೆಪಿ ಶಾಸಕ ಮುನಿರತ್ನ ಬಂಧನವಾಗಿದೆ ಎಂಬ ಬಿಜೆಪಿಗರ ಆರೋಪಕ್ಕೆ ಉತ್ತರ ನೀಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ , ನಮಗೆ ಅಂದರೆ ಕಾಂಗ್ರಸ್ಸಿನವರಿಗೆ ಬಿಜೆಪಿಗರಂತೆ ಷಡ್ಯಂತ್ರ ಮಾಡುವ ಅವಶ್ಯಕತೆಯಿಲ್ಲ ಏನಿದ್ದರೂ ಬಿಜೆಪಿಯವರಿಗೆ ಸೀಮಿತ ಟಾಂಗ್ ನೀಡಿದ್ದಾರೆ.
ಕಲಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ಸಿನವರು ಬಿಜೆಪಿಯವರ ರೀತಿ ಷಡ್ಯಂತ್ರ , ಸೇಡಿನ ರಾಜಕಾರಣ ಮಾಡಲೊರಟರೆ ದೇಶದಲ್ಲಿರುವ ಜೈಲುಗಳು ಸಾಕಾಗುವುದಿಲ್ಲವೆಂದು ತಿರುಗೇಟನ್ನು ನೀಡಿದ್ದಾರೆ.
ಸೇಡಿನ ರಾಜಕಾರಣ, ಷಡ್ಯಂತ್ರ, ತಂತ್ರ ಎಣೆಯುವುದು ಇವೆಲ್ಲಾ ಬಿಜೆಪಿಯವರಿಗೆ ಪ್ರಿಯವಾದವು, ನಮಗೆ ಅವುಗಳ ಅವಶ್ಯಕತೆ ಇಲ್ಲ. ಜನ ನಮ್ಮ ಮೇಲೆ ಭರವಸೆಯಿಟ್ಟಿದ್ದಾರೆ ಅದಕ್ಕೆ ಯಾವುದೆ ರೀತಿ ಲೋಪವಾಗದಂತೆ ನಮ್ಮ ಜವಾಬ್ದಾರಿಯನ್ನು ಪಾಲಿಸುತ್ತೇವೆ ಎಂದಿದ್ದಾರೆ.