ಬೆಂಗಳೂರು: ನನ್ನ ಪೊಲಿಟಿಕಲ್‌ ಕೆರಿಯರ್‌ನಲ್ಲಿ ಒಂದೇ ಒಂದು ಕಳಂಕವಿಲ್ಲವೆಂದು ಸಿಎಂ ಸಿದ್ದರಾಮಯ್ಯನವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ಎಂ.ಎಲ್.ಸಿ.ಯಾಗಿರುವ ಸಿಟಿ ರವಿ , ಮುಡಾ ಹಗರಣ, ಅರ್ಕಾವತಿ ಹಗರಣ, 40%ಕಮಿಷನ್‌ ಹಗರಣ  ಇತ್ಯಾದಿಯ ಹಗರಣಗಳೆಲ್ಲವೂ ನಿಮಗೆ ಕಳಂಕ ಎಂದೆನಿಸುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದಲ್ಲಿ ನಾವು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಲಾಗದೆ ಎದ್ದು ಬರುತ್ತೀರಾ? ಹೊರಗಡೆ ನಿಮ್ಮನ್ನು ನೀವು ಸಮರ್ಥಿಸಿಕೊಳ್ಳುತ್ತೀರಾ ಎಂದು ಸಿದ್ದರಾಮಯ್ಯನವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *