ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ಪ್ರಕರನಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಭಾರತ್ ನಗರದಲ್ಲಿರುವ ಗುತ್ತಿಗೆದಾರ ಚಲುವರಾಜ್ ನಿವಾಸಕ್ಕೆ ಭೇಟಿ ನೀಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಚ್ಚಾಳ್ಕರ್ ಮಾಹಿತಿಯನ್ನು ಪಡೆದಿದ್ದಾರೆ.
ಬಿಜೆಪಿ ಶಾಸಕ ಮುನಿರತ್ನ ಸುಮಾರು ಮೂರು ವರ್ಷಗಳಿಂದ ಕೊಡಬಾರದಂತಹ ಹಿಂಸೆಯನ್ನು ಕೊಟ್ಟಿದ್ದು, ಕಮಿಷನ್ ಕೊಡುವಂತೆ ಒತ್ತಾಯ ಮಾಡುತ್ತಿದ್ದರು, ನನ್ನ ಮತ್ತು ನನ್ನ ಪತ್ನಿಯನ್ನು ಹೀನಾಯವಾಗಿ ನಡೆಸಿಕೊಂಡು ಅವಮಾನ ಮಾಡಿದ ಅವರು ನನ್ನ ಪತ್ನಿಯ ಪೋಟೋ ಕಳಿಸುವಂತೆ ಕಿರುಕುಳ ನೀಡಿದ್ದಾರೆಂದು ಸಚಿವರ ಎದುರು ಕಣ್ಣೀರಿಟ್ಟಿದ್ದಾರೆ.
ನನಗೆ ಮತ್ತು ನನ್ನ ಕುಟುಂಬಕ್ಕೆ ರಕ್ಷನೆಯನ್ನು ನೀಡುವಂತೆ ಕೇಳಿಕೊಂಡಿರುವ ಚೆಲುವರಾಜ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಚ್ಚಾಳ್ಕರ್ ನಾವು ನಿಮ್ಮ ಜೊತೆಗಿರುತ್ತೆವೆ ಎಂಬ ಭರವಸೆಯನ್ನು ನೀಡಿದ್ದಾರೆ.