ರಾಹುಲ್ಗಾಂಧಿಯವರ ನಾಲಿಗೆ ಕಟ್ ಮಾಡಿದವರಿಗೆ 11ಲಕ್ಷ ರೂ ಬಹುಮಾನವನ್ನು ಘೋಷಣೆ ಮಾಡಿದ ಶಿವಸೇನೆ ಶಾಸಕ ಸಂಜಯ್ ಗಾಯಕ್ವಾಡ್ ವಿವಾದಾತ್ಮಕ ಹೇಳಿಕೆಯನ್ನು ನೀಡಿರುವುದು ತಿಳಿದುಬಂದಿದೆ.
ಲೋಕಸಭಾ ಚುನಾವಣೆಯ ವೇಳೆ ನಮ್ಮ ಸಂವಿದಾನ ಅಪಾಯದಲ್ಲಿದೆ ಎಂಬಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಜನರ ಮತಗಳನ್ನು ಸೆಳೆದುಕೊಳ್ಳುವ ಗಿಮಿಕ್ ಮಾಡಿದ್ದರು. ಅದೇ ರೀತಿ ಮಾಧ್ಯಮದವರೊಂದಿಗೆ ಸಂದರ್ಶನ ನೀಡುವ ವೇಳೆ ಮೀಸಲಾತಿಯನ್ನು ಅಂತ್ಯಗೊಳಿಸಲಾಗುತ್ತದೆ. ಎಂಬ ಹೇಳಿಕೆಯನ್ನು ಕೂಡಾ ನೀಡಿದ್ದರು ಇದರಿಂದಾನೆ ತಿಳಿಯುತ್ತದೆ ಕಾಂಗ್ರೆಸ್ಸಿನವರ ಮತ್ತೊಂದು ಮುಖ ಎಂದಿದ್ದಾರೆ.
ಮೀಸಲಾತಿಯನ್ನು ಅಂತ್ಯಗೊಳಿಸುವ ಬಗ್ಗೆ ಮಾತನಾಡಿರುವ ರಾಹುಲ್ಗಾಂಧಿಯವರ ನಾಲಿಗೆಯನ್ನು ಕತ್ತರಿಸಿದವರಿಗೆ 11 ಲಕ್ಷ ರೂಗಳನ್ನು ನೀಡುತ್ತೇನೆ ಎಂದಿದ್ದಾರೆ.