ಬೆಂಗಳೂರು: ನಾಗಮಂಗಲದಲ್ಲಿ ನಡೆದ ಗಲಭೆಯನ್ನು ಕಾಂಗ್ರೆಸ್ ಮಾಡಿಸಿರಬಹುದು ಎಂಬ ಆರೋಪವನ್ನು ಮಾಡಿದ ಕುಮಾರಸ್ವಾಮಿಯವರಿಗೆ ಮಾಜಿ ಸಂಸದ ಡಿಕೆ ಸುರೇಶ್ ತಿರುಗೇಟನ್ನು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್.ಡಿ.ಕುಮಾರಸ್ವಾಮಿಯವರೇ ಗಲಭೆಯನ್ನು ಮಾಡಿಸಿರಬಹುದು ಎಂದು ಕುಮಾರಸ್ವಾಮಿ ಆರೋಪ ಮಾಡಿದಂತೆ ನಾನು ಕೂಡಾ ಆರೋಪ ಮಾಡುತ್ತಿದ್ದೇನೆ ಎಂದು ಟಾಂಗ್ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಪ್ರತಿವಾರ ಬರ್ತಾರೆ ಅವರೇ ಗಲಾಟೆಯನ್ನು ಮಾಡಿಸಿರಬಹುದು. ಕುಮಾರಸ್ವಾಮಿಯವರು ದಿನಕ್ಕೊಂದು ಹೇಳಿಕೆಯನ್ನು ನೀಡುತ್ತಾರೆ.ಗಲಭೆಗಳು ನಡೆದಾಗ ಯಾವ ಯಾವ ಹೇಳಿಕೆಯನ್ನು ನೀಡಿದ್ದರು.ಈಗ ಯಾವ ಹೇಳಿಕೆ ನೀಡುತ್ತಿದ್ದಾರೆ ಎಂಬುದೆಲ್ಲವೂ ಗೊತ್ತಿದೆ. ಹತಾಶೆಯಿಂದಲೇ ಕುಮಾರಸ್ವಾಮಿಯವರು ಗಲಭೆಯನ್ನು ಮಾಡಿಸಿರಬಹುದೆಂದು ಡಿಕೆ ಸುರೇಶ್ ಕಿಡಿಕಾರಿದ್ದಾರೆ.