ಬೆಳಗಾವಿ: ಸಿಎಂ ಸ್ಥಾನಕ್ಕೇರಲು ಸ್ವಪಕ್ಷದ ನಾಯಕರೇ ಟೊಂಕಕಟ್ಟಿ ನಿಂತಿದ್ದಾರೆ.ಸಿಎಂ ‘ಸಿದ್ದರಾಮಯ್ಯವರು ಅಧಿಕಾರವಧಿ ಪ್ರಾರಂಭಿಸಿದ ದಿನದಿಂದಲೂ ಸ್ವಪಕ್ಷದ ನಾಯಕರಲ್ಲೇ ಮುಖ್ಯಮಂತ್ರಿಪಟ್ಟಕ್ಕಾಗಿ ಒಳಗೊಳಗೆ ಪೈಪೋಟಿ ಶುರುವಾಗಿದೆ. ಈ ಮೊದಲು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎಂಬ ಸುದ್ದಿಯೂ ಹರಿದಾಡುತ್ತಿತ್ತು. ಆದರೀಗ ಸಿಎಂ ಸ್ಥಾನಕ್ಕಾಗಿ ಆಕಾಂಕ್ಷಿಗಳ ಪಟ್ಟಿ ಬೆಳೆದಿದ್ದು ಹಲವಾರು ನಾಯಕರು ಸಿಎಂ ಕುರ್ಚಿಯ ಮೇಲೆ ಟವೆಲ್ ಹಾಕಿ ಕಾಯುತ್ತಿದ್ದಾರೆ’ ಎಂದು ಸಂಸದ ಜಗದೀಶ ಶೆಟ್ಟರ್ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಆಂತರಿಕ ಕಲಹಗಳು ಸಿಎಂ ಸಿದ್ದರಾಮಯ್ಯನವರು ಅಧಿಕಾರ ಸ್ವೀಕರಿಸಿದ ದಿನದಿಂದಲೇ ಶುರುವಾಗಿದ್ದು ಅದೀಗ ಮತ್ತಷ್ಟು ಹೆಚ್ಚಾಗುತ್ತಿದೆ. ವಾಲ್ಮೀಕಿ ನಿಗಮದ ಹಗರಣ ಮತ್ತು ಮುಡಾ ಹಗರಣದ ಪ್ರಕರಣಗಳು ಬೆಳಕಿಗೆ ಬಂದಿವೆ. ಇವರ ಅಧಿಕಾರವಧಿಯಲ್ಲಿ ಭ್ರಷ್ಟಾಚಾರ, ಅಕ್ರಮಗಳು, ಹೆಚ್ಚಾಗಿವೆ. ಈ ಸರ್ಕಾರಕ್ಕೆ ಭವಿಷ್ಯವಿಲ್ಲ, ಅತೀ ಶೀಘ್ರದಲ್ಲೇ ಪತನವಾಗುತ್ತದೆ ಎಂದಿದ್ದಾರೆ