ನಾವೆಲ್ಲರೂ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಲು ಇನ್ನಿಲ್ಲದ ಕಸರತ್ತನ್ನು ನಡೆಸುತ್ತಲೇ ಇರುತ್ತೇವೆ.ನಮ್ಮ ಅಂದವನ್ನು ಹೆಚ್ಚಿಸುವ ಮುಖ್ಯ ಭಾಗವಾಗಿರುವ ತುಟಿಯು ತುಂಬಾ ಸೂಕ್ಷ್ಮವಾಗಿರುತ್ತದೆ.ಇದನ್ನು ಸರಿಯಾಗಿ ಪಾಲನೆ ಮಾಡಿದರೆ ಮತ್ತಷ್ಟು ಅಂದವನ್ನು ಹೆಚ್ಚು ಮಾಡುತ್ತದೆ.

ತುಟಿಗಳ ರಕ್ಷಣೆಗೆ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದೆಂಬುರ ಜಲಕ್ ಹೀಗಿದೆ.

ಚಳಿಗಾಲದಲ್ಲಂತೂ ಒಣಚರ್ಮದ ಸಮಸ್ಯೆಯಿಂದ ಬಳಲುತ್ತಿರುವವರ ತುಟಿಗಳು ಒಡೆದು ರಕ್ತ ಬರುವ ಹಾಗೆ ಆಗಿರುತ್ತದೆ. ಇದಕ್ಕೆ ಕಾರಣವೆನೆಂದರೆ ಸರಿಯಾಗಿ ನೀರು ಕುಡಿಯದಿರುವುದು.ಸರಿಯಾಗಿ ನೀರು ಕುಡಿಯದಿದ್ದರೆ ತುಟಿ ಒಣಗುತ್ತದೆ ಈ ಒಣಗಿದ ತುಟಿಯನ್ನು ನೋಡಿ ಎಚ್ಚೆತ್ತುಕೊಂಡರೆ ಒಳಿತು.

ಹಾಲಿನ ಕೆನೆ

ಯಾವುದೇ ರಾಸಾಯನಿಕ ಪದಾರ್ಥಗಳನ್ನು ಬಳಸದೇ ನಮ್ಮ ಮನೆಯಲ್ಲಿಯೇ ಸಿಗುವಂತಹ ಹಾಕಿನ ಕೆನೆಯನ್ನು ಹಚ್ಚುತಾ ಬಂದರೆ ಒಣಗಿದ ತುಟಿಗಳಿ ಹೊಳಪು ಬಂದು ಮೃದುವಾಗುತ್ತದೆ.

ತುಟಿಗಳು ಕಪ್ಪಾಗಿದ್ದರೆ ದಾಳಿಂಬೆ ಹೂವನ್ನು ತೆಗೆದುಕೊಂದು ಪೇಸ್ಟ್‌ ಮಾಡಿ ಹಚ್ಚಿಕೊಂಡರೆ ಕ್ರಮೇಣಾ ಲೈಟ್‌ ಪಿಂಕ್‌ ಬಣ್ಣಕ್ಕೆ ತಿರುಗತ್ತದೆ.

ರೋಸ್‌ ವಾಟರ್‌

ರೋಸ್‌ ವಾಟರ್‌ ಅನ್ನು ತ್ವಚೆಯ ರಕ್ಷಣೆಗಾಗಿ ಬಳಸುತ್ತೇವೆ ಹಾಗೆಯೇ ತುಟಿಗಳ ಆರೋಗ್ಯಕ್ಕೂ ಒಳ್ಳೆಯದು.

ಒಳ್ಳೆಯ ಗುಣಮಟ್ಟದ ಲಿಪ್‌ ಬಾಮ್‌ಗಳನ್ನು ಕೂಡಾ ಹಚ್ಚಿಕೊಳ್ಳಬಹುದು.

ಸೌತೆಕಾಯಿಯ ಜ್ಯೂಸ್‌ನ್ನು ಹಚ್ಚಿ ಮಸಾಜ್‌ ಮಾಡಬಹುದು ಅಥವಾ ಸೌತೆಕಾಯಿ ಹೋಳಿನಿಂದ ತುಟಿಗಳಿಗೆ ಮೃದುವಾಗಿ ಉಜ್ಜಿದರೆ ತೇವಾಂಶ ಉಳಿಯುವಂತೆ ಮಾಡುತ್ತದೆ.

ತುಟಿಗಳಿಗೆ ಜೇನುತುಪ್ಪವನ್ನು ಹಚ್ಚಿ ಕೆಲವು ನಿಮಿಷಗಳ ಕಾಲ ಮಸಾಜ್‌ ಮಾಡಿ ತಣ್ಣೀರಿನಿಂದ ತೊಳೆದರೆ ಮೃದುವಾಗುತ್ತದೆ.

ಬಾದಾಮಿ ಎಣ್ಣೆಯ ಜೊತೆ ಜೇನುತುಪ್ಪವನ್ನು ಸೇರಿಸಿ ಹಚ್ಚಿದರೆ ಹೊಳಪು ಹೆಚ್ಚಾಗುತ್ತದೆ.

ಆಲೀವ್‌ ಆಯಿಲ್‌ ಮತ್ತು ಸಕ್ಕರೆಯ ಮಿಶ್ರಣವನ್ನು ತುಟಿಗಳಿಗೆ ಹಚ್ಚಿ ಮಸಾಜ್‌ ಮಾಡಿದರೆ ಸತ್ತಜೀವಕೊಶಗಳನ್ನು ತೊಡೆದುಹಾಕಿ ಸಹಜ ಸ್ಥತಿಗೆ ತರುತ್ತದೆ.

ತೆಂಗಿನ ಎಣ್ಣೆಯನ್ನು ನೇರವಾಗಿ ಒಣ ತುಟಿಗಳಿಗೆ ಹಚ್ಚಿಕೊಳ್ಳಬಹುದು.

ಈ ಟಿಪ್ಸ್‌ಗಳನ್ನು ಮಾಡುವ ಮುನ್ನ ವೈದ್ಯರ ಸಲಹೆ ಪಡೆಯಿರಿ

Leave a Reply

Your email address will not be published. Required fields are marked *