ರೇಣುಕಾಸ್ವಾಮಿ ಕೊಲೆ ಪ್ರಕರಣವೂ ರಾಜ್ಯಾದ್ಯಂತ ಚರ್ಚೆಯಾಗುತ್ತಿದ್ದು ಚಾರ್ಜ್ಶೀಟ್ ಸಲ್ಲಿಕೆಯಾಗಿದ್ದು ಕೆಲವು ಪೋಟೋಗಳು ವೈರಲ್ ಆಗುತ್ತಿವೆ. ಇದರ ನಡುವೆ ನಿರ್ಮಾಪಕ ಉಮಾಪತಿ ಕೇಸ್ ಕುರಿತು ಮಾತನಾಡಿದ್ದಾರೆ.
ಮಾನವೀಯತೆ ದೃಷ್ಟಿಯಿಂದ ನೋಡಿದರೆ ರೇಣುಕಾಸ್ವಾಮಿಯನ್ನು ಕೊಲೆ ಮಾಡಿರುವುದು ತಪ್ಪು. ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.ನ್ಯಾಯಾಲಯ ತೀರ್ಮಾನ ಮಾಡುತ್ತದೆ.ಸುಮ್ಮನೆ ಕಮೆಂಟ್ ಮಾಡುವುದು ಬೇಡ. ನನಗೆ ತೊಂದರೆಯಾದಾಗ ಎದೆಕೊಟ್ಟು ನಿಂತು ಹೋರಾಡಿದ್ದೇನೆ ಎಂದಿದ್ದಾರೆ.
“ಪ್ರತಿಕಾರ ತೀರಿಸಿಕೊಳ್ಳಲುಬೇರೆ ರೀತಿ ಇರ್ತದೆ” ಪೊಲೀಸ್ ಸ್ಟೇಷನ್ನಿನಲ್ಲಿ ಕಂಪ್ಲೇಂಟ್ ಕೊಟ್ಟೆ.ಪೊಲೀಸರು ಕ್ರಮ ಕೈಗೊಂಡರು.ನಾವು ಬೇರೆಯವರಿಗೆ ಮಾದರಿಯಾಗಿರಬೇಕು.
ಯಾವಾಗಲೂ ಮೇಲೆಯೇ ಇರಲು ಸಾದ್ಯವಿಲ್ಲ.ಕೆಳಗೆ ಬರಲೇಬೇಕು.ತಗ್ಗಿಬಗ್ಗಿ ನಡೆಯಬೇಕಾಗುತ್ತದೆ. ಒಂದು ಕಂಪ್ಲೆಂಟ್ ಕೊಟ್ಟಿದ್ದರೆ ಮುಗಿದೊಗ್ತಿತ್ತು.ಆದರೀಗ ಎಷ್ಟು ಜನರ ಜೀವ ಜೀವನ ಹೋಯ್ತು ಎಂದಿದ್ದಾರೆ.
ನಡೆದಿರುವ ಅನಾಹುತದಿಂದ ರೇಣುಕಾಸ್ವಾಮಿ ಜೀವ ಮರಳಿ ಬರುವುದಿಲ್ಲ.ನಾನು ನನ್ನ ಗಡಿಯಲ್ಲಿ ಮಾತನಾಡಿದ್ದೇನೆ.ದರ್ಶನ್ ನನ್ನ ಶತ್ರು ಅಲ್ಲ.ನನ್ನ ಬ್ಯಾನರ್ಗೆ ಒಳ್ಳೆ ಸಿನಿಮಾ ಕೊಟ್ಟಿದ್ದಾರೆ ಅವರ ಕುಟುಂಬಕ್ಕೆದೇವರು ಶಕ್ತಿ ನೀಡಲಿ ಎಂದಿದ್ದಾರೆ.