ಬಳ್ಳಾರಿ:ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲು ಸೇರಿದ್ದಾರೆ.ಕೊಲೆ ಮತ್ತು ಹತ್ಯೆ ಪ್ರಕರಣದ ಚಾರ್ಜ್ಶೀಟ್ ಈಗಾಗಲೇ ಸಲ್ಲಿಕೆಯಾಗಿದ್ದು ದರ್ಶನ್ ಮತ್ತು ಇತರರು ರೇಣುಕಾಸ್ವಾಮಿಗೆ ನೀಡಿರುವ ಚಿತ್ರಹಿಂಸೆಯ ಪೋಟೋಗಳು ಇದೀಗ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿವೆ, ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ರನ್ನು ಭೇಟಿ ಮಾಡಲು ರಕ್ತಸಂಬಂಧಿಗಳು ಮತ್ತು ಅವರ ಪರ ವಾದ ಮಾಡುವ ವಕೀಲರಿಗೆ ಮಾತ್ರ ಅವಕಾಶವನ್ನು ನೀಡಲಾಗಿತ್ತು.
ಆರೋಪಿ ದರ್ಶನ್ರವರನ್ನು ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಿದ್ದರೂ ಕೂಡ ಅವರನ್ನು ನೋಡಲು ಅಭಿಮಾನಿಗಳು ಜೈಲಿನ ಕಡೆ ಧಾವಿಸುತ್ತಿದ್ದು ಇಲ್ಲೊಬ್ಬ ಮಹಿಳಾ ಅಭಿಮಾನಿ ನನಗೆ ದರ್ಶನ್ ಎಂದರೆ ತುಂಬಾ ಇಷ್ಟ. ಅವರ ಹೆಂಡತಿಯಾಗಲು ಸಿದ್ದಳಿದ್ದೇನೆ, ಅವರನ್ನು ನೋಡ್ಕಂಡೆ ಮನೆಗೆ ಹೋಗ್ತೀನಿ. ದರ್ಶನ್ರನ್ನು ನೋಡಲು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೂ ಹೋಗಿದ್ದೆ, ಅದೇ ರೀತಿ ಬಳ್ಳಾರಿಗೂ ಬಂದಿದ್ದೇನೆ.ಅವರಿಗಾಗಿ ಹಣ್ಣುಗಳನ್ನು ತಂದಿದ್ದೇನೆ .ಜೈಲಿನಲ್ಲಿ ಅನುಮತಿ ನೀಡಿದರೆ ಊಟ-ತಿಂಡಿಯನ್ನು ತಂದುಕೊಡುತ್ತೇನೆ ಎಂದಿದ್ದಾರೆ.