ಬೆಂಗಳೂರು: ಡೆಂಗ್ಯೂ ಜ್ವರವನ್ನು ರಾಜ್ಯ ಸರ್ಕಾರವೂ ಸಾಂಕ್ರಾಮಿಕ ರೋಗವೆಂದು ಘೋಷಣೆಯಾದ ಬಳಿಕ ಸ್ವಚ್ಚತೆಯನ್ನು ಕಾಪಾಡಿಕೊಳ್ಳದಿದ್ದರೆ ದಂಡವನ್ನು ವಿಧಿಸಲಾಗುತ್ತದೆ ಎಂದು ಖಡಕ್ ವಾರ್ನಿಂಗ್ ನೀಡಿದೆ.
ರಾಜ್ಯದಲ್ಲಿ ಡೆಂಗ್ಯೂ ಪ್ರಕರಣದ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ . 2020ರ ಕಾಯ್ದೆಯ ನಿಯಮ ತಿದ್ದುಪಡಿ ಮಾಡಿ ಸಾಂಕ್ರಾಮಿಕ ರೋಗ-2024 ಎಂಬ ಶೀರ್ಷಿಕೆ ಮೂಲಕ ಘೋಷಿಸಲಾಗಿದೆ.
ನಗರಗಳ ದಂಡದ ವಿವರ ಹೀಗಿದೆ:
* ರೂ.400 ಕುಟುಂಬಗಳಿಗೆ
*ರೂ.1000 ವಾಣಿಜ್ಯ ಸಂಸ್ಥೆ, ಕಚೇರಿಗಳು, ಶಾಲಾ-ಕಾಲೇಜುಗಳು, ಆರೋಗ್ಯ ಸೇವಾ ಕ್ಷೇತ್ರಗಳಿಗೆ
*ರೂ.2000 ಖಾಲಿ ನಿವೇಶನಗಳಿಗೆ
ಗ್ರಾಮೀಣ ಭಾಗದ ದಂಡದ ವಿವರ ಹೀಗಿದೆ :
*ರೂ.200 ಗ್ರಾಮೀಣ ಪ್ರದೇಶಗಳಲ್ಲಿನ ಕುಟುಂಬಗಳಿಗೆ
*ರೂ.500 ಗ್ರಾಮೀಣ ಪ್ರದೇಶದ ವಾಣಿಜ್ಯ ಸಂಸ್ಥೆಗಳು, ಕಚೇರಿಗಳು, ಶಾಲಾ-ಕಾಲೇಜುಗಳು, ಆರೋಗ್ಯ ಸೇವಾ ಕ್ಷೇತ್ರಗಳಿಗೆ
*ರೂ.1000 ಖಾಲಿ ನಿವೇಶನಗಳಿಗೆ ಎಂದು ಪಟ್ಟಿಯನ್ನು ಸಿದ್ದಪಡಿಸಿದೆ.
ಸುತ್ತಮುತ್ತಲಿರುವ ಪರಿಸರವನ್ನು ಸ್ವಚ್ಚವಾಗಿಡಬೇಕೆ ಇಲ್ಲದಿದ್ದರೆ ನಿಂತಲ್ಲಿ ನೀರು ನಿಂತುಕೊಂಡು ಸೊಳ್ಳಗಳ ಉತ್ಪತ್ತಿಗೆ ದಾರಿಮಾಡಿಕೊಟ್ಟಂತಾಗುತ್ತದೆ ಆದ್ದರಿಂದ ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬೇಕು ಅದನ್ನು ಬಿಟ್ಟು ನಿರ್ಲಕ್ಷ್ಯ ತೋರಿದರೆ ದಂಡ ಕಟ್ಟಲೇ ಬೇಕಾಗುತ್ತದೆ ಎಚ್ಚರಿಕೆ