ಹೈದರಾಬಾದ್: ಭಾರೀ ಮಳೆಯಿಂದಾಗಿ ಪ್ರವಾಹಪೀಡಿತ ಪರಿಸ್ಥಿತಿಯಲ್ಲಿರುವ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಸಂತ್ರಸ್ಥರ ನೆರವಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನಟ ಅಲ್ಲು ಅರ್ಜುನ್ 1 ಕೋಟಿ ಮತ್ತು ನಟ ಚಿರಂಜೀವಿ 1 ಕೋಟಿ ದೇಣಿಗೆಯನ್ನು ನೀಡಿದ್ದರೆ, ನಟ ಮಹೇಶ್ ಬಾಬುರವರು 50 ಲಕ್ಷವನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಬಾರೀ ಮಳೆಯಿಂದಾಗಿರುವ ಪ್ರವಾಹದಿಂದಾಗಿ ಎರಡೂ ರಾಜ್ಯಗಳು ಅಪಾರ ಪ್ರಮಾಣದ ಆಸ್ತಿಯನ್ನು ಕಳೆದುಕೊಂಡು ತತ್ತರಿಸಿ ಹೋಗಿವೆ, ಜನರ ಸುರಕ್ಷತೆಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಅಲ್ಲುಅರ್ಜುನ್ ತಮ್ಮ ಸಾಮಾಜಿಕ ಜಾಲಾತಾಣದಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ.
ತೆಲಗು ರಾಜ್ಯಗಳಲ್ಲಿ ಪ್ರವಾಹ ಉಂಟಾಗಿರುವುದಕ್ಕೆ ಬೇಸರವಾಗಿದೆ. ಇಂತಹ ಸಮಯದಲ್ಲಿ ಸಂತ್ರಸ್ಥರಿಗೆ ನೆರವಿನ ಅಗತ್ಯವಿದೆ ಎರಡೂ ರಾಜ್ಯಗಳಿಗೂ 1ಕೋಟಿ ದೇಣಿಗೆಯನ್ನು ನೀಡಲಾಗಿದೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.