ಬೆಂಗಳೂರು: ಡೆಂಗ್ಯೂ ಜ್ವರದ ಪ್ರಕರಣಗಳ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಇದನ್ನು “ಸಾಂಕ್ರಾಮಿಕ ರೋಗ” ಎಂದು ಸರ್ಕಾರ ಘೋಷಿಸಿರುವುದ ಬೆಳಕಿಗೆ ಬಂದಿದೆ.

ಡೆಂಗ್ಯೂ ಜ್ವರದಿಂದ ಬಳಲುತ್ತಿರುವವರು ಹೆಚ್ಚಾಗಿರುವ ಹಿನ್ನೆಲೆ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ-2020ರ ಕಾಯ್ದೆಯನ್ನು ತಿದ್ದುಪಡಿ ಮಾಡಲು ಸರ್ಕಾರ ನಿರ್ಧಾರ ಮಾಡಿದೆ ಎಂದು ʼಎಎನ್‌ಐʼ ಸುದ್ದಿಸಂಸ್ಥೆಯಿಂದ ತಿಳಿದುಬಂದಿದೆ.

ರಾಜ್ಯದಲ್ಲಿ 25.408 ಡೆಂಗ್ಯೂ ಪೀಡಿತ ಪ್ರಕರಣಗಳು ವರದಿಯಾಗಿದ್ದು ಇದರಲ್ಲಿ 23.827 ಮಂದಿ ಗುಣಮುಖರಾಗಿದ್ದಾರೆ ಸದ್ಯ ರಾಜ್ಯದಲ್ಲಿ 1.569 ಪ್ರಕರಣಗಳು ಸಕ್ರಿಯವಾಗಿವೆ ಎನ್ನಲಾಗಿದೆ.

Leave a Reply

Your email address will not be published. Required fields are marked *