ಬೆಂಗಳೂರು: ಗೌರಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬಗಳು ಆಚರಿಸುವ ಸಮಯದಲ್ಲಿ ಡಿಜೆ ಸೌಂಡನ್ನು ಬಳಸುವಂತಿಲ್ಲ ಸಂಪೂರ್ಣವಾಗಿ ನಿಷೇಧಿಸಬೇಕೆಂದು ರಾಜ್ಯ ಸರ್ಕಾರ ಖಡಕ್ ವಾರ್ನಿಂಗ್ ನೀಡಿದೆ.
ಗಣೇಶ ಹಬ್ಬವನ್ನು ಆಚರಿಸುವಾಗ ಸೌಂಡ್ ಸಿಸ್ಟಮ್ ಇದ್ದೇ ಇರುತ್ತದೆ ಆದರೆ ಈ ಸಲ ಅದನ್ನು ಬಳಸಬಾರದು ಎಂದು ಸರ್ಕಾರವೇ ನಿರ್ಧರಿಸಿದೆ. ಈ ರೀತಿಯ ಸೌಂಡ್ ಬಳಸುವುದರಿಂದ ವಿದ್ಯಾರ್ಥಿಗಳಿಗೆ, ವಯಸ್ಸಾದವರಿಗೆ,ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರಿಗೆ ತೊಂದರೆಯಾಗುವುದಲ್ಲದೆ ಗುಂಪುಗಳಲ್ಲಿಯೇ ಗದ್ದಲ, ಜಗಳಗಳು, ಸಂಘರ್ಷಗಳು ಹೆಚ್ಚಾಗುತ್ತವೆ ಎನ್ನುವ ಅಂಶವನ್ನು ಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ರಾಜ್ಯದಲ್ಲಿ ಶಾಂತಿ, ಸೌಹಾರ್ಧತೆ, ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಗೌರಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬಗಳು ಆಗುವವರೆಗೂ ಡಿಜೆಯನ್ನು ಹಾಕದಂತೆ ಆಯಾ ಜಿಲ್ಲಾಧಿಕಾರಿಗಳು ಆದೇಶವನ್ನು ಹೊರಡಿಸಬೇಕೆಂದು ರಾಜ್ಯ ಸರ್ಕಾರ ಸೂಚನೆ ನೀಡಿದೆ.