ಸ್ವರ್ಗಕ್ಕೆ ಹೋಗಲು ಇಷ್ಟಪಡುವವರು ಸಂಸ್ಕೃತವನ್ನು ಕಲಿಯಬೇಕೆಂದು ಪರ್ಯಾಯ ಪುತ್ತಿಗೆ ಶ್ರೀಸುಗುಣೇಂದ್ರತೀರ್ಥ ಸ್ವಾಮೀಜಿ ಹೇಳಿಕೆಯನ್ನು ನೀಡಿದ್ದಾರೆ.
ಪರ್ಯಾಯ ಪುತ್ತಿಗೆ ಶ್ರೀಸುಗುಣೇಂದ್ರತೀರ್ಥ ಸ್ವಾಮೀಜಿ ಹೇಳಿಕೆಯು ವಿವಾದವನ್ನು ಸೃಷ್ಟಿಸಿದ್ದು ಸಾಮಾಜಿಕ ಜಾಲಾತಾಣದಲ್ಲಿ ಪರ-ವಿರೋದದ ಚರ್ಚೆಗಳು ನಡೆಯುತಿದ್ದು ಹೆಚ್ಚಿನ ಜನರು ವಿರೋದವನ್ನು ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ.
ಶ್ರೀಕೃಷ್ಣಮಠದ ಶ್ರೀಕೃಷ್ಣ ಜನ್ಮಾಷ್ಟಮಿ-ಶ್ರೀಕೃಷ್ಣ ಲೀಲೋತ್ಸವದಲ್ಲಿ ಮಾತನಾಡಿದ ಸ್ವಾಮೀಜಿ ಸಂಸ್ಕೃತ ಭಾಷೆ ಕಲಿಯದಿದ್ದರೆ ಸ್ವರ್ಗಕ್ಕೆ ವೀಸಾ ಸಿಗುವುದಿಲ್ಲ.ಸ್ವರ್ಗಕ್ಕೆ ಹೋಗಲು ಇಷ್ಟಪಡುವವರು ಸಂಸ್ಕೃತ ಭಾಷೆಯನ್ನು ಕಲಿಯಲೇಬೇಕು. ಈ ಭಾಷೆಯು ಶ್ರೇಷ್ಠ ಭಾಷೆ.
ಇದು ತುಂಬಾ ಸುಂದರ ಮತ್ತು ಸರಳ ಭಾಷೆಯಾಗಿದ್ದು ಇದೇ ಸಂಸ್ಕೃತ ಭಾಷೆಯೂ ಕನ್ನಡ, ಇಂಗ್ಲೀಷ್ ಭಾಷೆಗಳ ಮೂಲವೂ ಇದೇ ಭಾಷೆಯಾಗಿದೆ ಎಂದಿದ್ದಾರೆ.