ಬೆಂಗಳೂರು:ನಟ ದರ್ಶನ್ ಅಭಿನಯದ ಕರಿಯ ಸಿನಿಮಾವನ್ನು 20 ವರ್ಷಗಳ ನಂತರ ಮತ್ತೆ ರಿಲೀಸ್ ಮಾಡಿರುವುದು ದರ್ಶನ್ ಅಭಿಮಾನಿಗಳಿಗೆ ಹೊಸ ಹುರುಪನ್ನು ತಂದುಕೊಟ್ಟಿದ್ದು ಕರಿಯ ಚಿತ್ರವನ್ನು ಭರ್ಜರಿಯಾಗಿ ಬರಮಾಡಿಕೊಂಡಿದ್ದಾರೆ.
ಕರಿಯ ಚಿತ್ರದ ಪೋಸ್ಟರ್ ಮತ್ತು ವೈರಲ್ ಆದ ಜೈಲಿನ ಪೋಟೋಗೆ ಹಾರ ತುರಾಯಿಗಳನ್ನು ಹಾಕಿ ಹಾಲಿನ ಅಭಿಷೇಕವನನು ಮಾಡಿ ಜೈಕಾರ ಕೂಗಿದ್ದಾರೆ. ಈ ವೇಳೆ ಗಲಾಟೆ, ಗದ್ದಲ ಮಾಡದಂತೆ ಪೊಲೀಸ್ ವಾರ್ನಿಂಗ್ ನ್ನು ನೀಡಿದ್ದಾರೆ.
ದರ್ಶನ್ ಅಭಿಮಾನಿಯೊಬ್ಬ ಪೊಲೀಸರ ಮಾತನ್ನು ನಿರ್ಲಕ್ಷಿಸಿ ಮಾದ್ಯಮದವರನ್ನು ತುಚ್ಚವಾಗಿ ನಿಂದಿಸಿದ್ದರ ಪರಿಣಾಮ ಅವನನ್ನು ಬಂಧಿಸಲೊರಟಾಗ ಬಿಟ್ಟುಬಿಡಿ ಎಂದು ಅಂಗಲಾಚಿ ಬೇಡಿಕೊಂಡಿದ್ದಾನೆ. ಮತ್ತೊಮ್ಮೆ ಹೀಗೆ ಮಾಡಬಾರದು ಎಂದೇಳಿ ಕಳಿಸಿದ್ದಾರೆ.
ಸಿನಿಮಾವನ್ನು ನೋಡಲು ಬಂದ ದಾಸನ ಅಭಿಮಾನಿಗಳ ಮೇಲೆ ಲಾಠಿ ಚಾರ್ಜ್ ಕೂಡ ನಡೆದಿದ್ದು ಪ್ರಸನ್ನ ಚಿತ್ರಮಂದಿರದ ಮುಂದಿದ್ದ ಅಭಿಮಾನಿಗಳು ಲಾಠಿ ಪ್ರಹಾರದ ವೇಳೆ ಚೆಲ್ಲಾಪಿಲ್ಲಿಯಾಗಿದ್ದಾರೆ.