ಮಂಡ್ಯ:ಮುಡಾ ಹಗರಣ ಕುರಿತು ಸಿದ್ದರಾಮಯ್ಯನವರ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷವೂ ಇದೇ ತಿಂಗಳ 30 ರಂದು ರಾಜಭವನ ಚಲೋಗೆ ಕರೆಯನ್ನ ನೀಡಿದೆ. ಈ ವಿಚಾರದ ಕುರಿತು ಸಚಿವ ಹೆಚ್ಡಿ ಕುಮಾರಸ್ವಾಮಿ ರಾಜಭವನ ಚಲೋ ಬದಲು ಸೋನಿಯಾ ಗಾಂಧಿ ಮನೆ ಚಲೋ ಮಾಡಲಿ ಎಂದು ವ್ಯಂಗ್ಯ ಮಾಡಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜಭವನ ಚಲೋ ಮಾಡುತ್ತಿರುವುದಕ್ಕೆ ಬಹಳ ಖಷಿಯಾಗಿದೆ. ರಾಜಭವನದ ಜೊತೆಗೆ ರಾಷ್ಟ್ರಪತಿ ಚಲೋ,ಕೂಡಾ ಮಾಡಲಿ. ಮಾಡೋದ್ ಮಾಡ್ತಾರೆ ರಾಜ್ಯಪಾಲರ ಅನುಮತಿ ಪಡೆದು ತನಿಖೆ ನಡೆಸಲಿ ಎಂದು ಸಚಿವರಿಗೆ ಸವಾಲನ್ನು ಹಾಕಿದ್ದಾರೆ.