ಮೈಸೂರು: ಲವ್ ಜಿಹಾದ್ ಬಗ್ಗೆ ಪ್ರವಚನದಲ್ಲಿ ಸ್ವಾಮಿಜಿಗಳು ಹೇಳದಿದ್ದರೆ ಸಮಾಜವೂ ಉಳಿಯುವುದಿಲ್ಲ, ಮಠಗಳು ಉಳಿಯುವುದಿಲ್ಲ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
ಹಿಂದೂ ಹೆಣ್ಣುಮಕ್ಕಳನ್ನು ಮಾದಕ ಪಾನಿಯವನ್ನು ಕುಡಿಸಿ ಅತ್ಯಾಚಾರ ಮಾಡಿದ್ದಾರೆ.ಈ ರೀತಿ ನಡೆದಿರುವುದು ಇದೇ ಮೊದಲೇನಲ್ಲ ಅದೆ ರೀತಿ ಕೊನೆಯೂ ಅಲ್ಲ, ಇದರ ಬಗ್ಗೆ ಪೊಲೀಸ್ ಇಲಾಖೆಯು ಜವಾಬ್ದಾರಿಯನ್ನು ತೆಗೆದುಕೊಂಡು ಡ್ರಗ್ಸ್ ಮಾಫಿಯಾವನ್ನು ತಡೆಗಟ್ಟಬೇಕು. ಪೊಲೀಸರಿಗೆ ಗೊತ್ತಿಲ್ಲದೆ ಡ್ರಗ್ಸ್ ಮಾಫಿಯಾ ನಡೆಯಲು ಸಾದ್ಯವಿಲ್ಲವೆಂದು ಕಾರ್ಕಳ ಘಟನೆಯು ಪೊಲೀಸರ ಜವಾಬ್ದಾರಿ ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ.
ದೇವಸ್ಥಾನಗಳಲ್ಲಿ, ಮಠಗಳಲ್ಲಿ “ಲವ್ ಜಿಹಾದ್”” ಬಗ್ಗೆ ಹಿಂದೂ ಸ್ವಾಮಿಜಿಗಳು ಪ್ರವಚನ ಮಾಡಬೇಕು ಇಲ್ಲವಾದರೆ ಮಠದ ಮುಂದೆ ಧರಣಿ ಕೂರುತ್ತೇವೆ. ಇನ್ನೆಷ್ಟು ದಿನ ನಾವು ಸಹಿಸಿಕೊಳ್ಳಬೇಕು, ಇನ್ನೇಷ್ಟು ಸಂಸ್ಕಾರವಂತ ಹೆಣ್ಣುಮಕ್ಕಳು ಬಲಿಯಾಗಬೇಕು.ಇನ್ನು ಮುಂದೆ ಇದನ್ನು ತಡೆಯಲು ಉಗ್ರ ಹೋರಾಟ ಮಾಡುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಹಿಂದೂ ಹೆಣ್ಮಕ್ಕಳ ದೌರ್ಜನ್ಯಕ್ಕೆ ಮುಖ್ಯ ಕಾರಣ ಕಾಂಗ್ರೆಸ್ ಸರ್ಕಾರ. ಮುಸ್ಲೀಂರಿಗೆ ಕಾಂಗ್ರೆಸ್ ಪ್ರೋತ್ಸಾಹ ನೀಡುತ್ತಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶದ ರೀತಿಯಲ್ಲಿ ಆರೋಪಿಯ ಮನೆಯನ್ನು ಬುಲ್ಡೋಜರ್‌ನಿಂದ ಬೀಳಿಸಬೇಕು ಎಂದಿದ್ದಾರೆ.