ಚೆನೈ: ತಮಿಳುನಾಡಿನ ನೈವೇಲಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ತಮಿಳುನಾಡು ಸಚಿವ ಉದಯನಿಧಿ ಬಿಜೆಪಿ ಪಕ್ಷವನ್ನು “ವಿಷಕಾರಿ ಹಾವು” ಎಂದು ಕರೆದಿದ್ದಾರೆ.

ಅದಷ್ಟೇ ಅಲ್ಲದೇ, ಪ್ರತಿಪಕ್ಷ ಎಐಎಡಿಎಂಕೆ ಹಾವುಗಳಿಗೆ ಆಶ್ರಯ ನೀಡುವ ಪಕ್ಷವಾಗಿ ಮಾರ್ಪಟ್ಟಿದೆ ಎಂದು ಉದಯನಿಧಿ ಹೇಳಿದ್ದಾರೆ. “ವಿಷಕಾರಿ ಹಾವು ನಿಮ್ಮ ಮನೆಗೆ ಬಂದರೆ, ಅದನ್ನು ಹೊರತೆಗೆದು ಹೊರಗೆ ಎಸೆಯಲು ಸಾಧ್ಯವಿಲ್ಲ ನಿಮ್ಮ ಮನೆಯ ಸುತ್ತಲಿನ ಕಸದಲ್ಲಿ ಅಡಗಿದೆ. ಸುತ್ತಮುತ್ತಲಿನ ಕಸವನ್ನು ತೆರವು ಮಾಡದಿದ್ದರೆ ಮತ್ತೆ ಮನೆಯ ಕಡೆಗೆ ಬರುತ್ತದೆ. ಈ ಪ್ರಸಕ್ತ ಸ್ಥಿತಿಯೂ ಹಾಗೆ ಆಗಿದೆ ಎಂದಿರುವ ಅವರು ತಮಿಳುನಾಡು ನಮ್ಮ ಮನೆ. ಬಿಜೆಪಿ ಒಂದು ವಿಷಕಾರಿ ಹಾವು ಇದ್ದಂತೆʼ ಎಂದಿದ್ದಾರೆ.

ಎಐಎಡಿಎಂಕೆ ನಮ್ಮ ಮನೆಯ ಕಸವಿದ್ದಂತೆ, ನಾವು ಕಸವನ್ನು ಎತ್ತುವವರೆಗೂ ವಿಷಕಾರಿ ಸರ್ಪವು ಹೋಗುವುದಿಲ್ಲ. “ನೀವು ಬಿಜೆಪಿಯಿಂದ ಆಚೆ ಬರಲು ಬಯಸಿದರೆ ಎಐಎಡಿಎಂಕೆಯನ್ನು ತೆಗೆದುಹಾಕಬೇಕು”ಎಂದು ಉದಯನಿಧಿಯವರು ಹೇಳಿಕೆ ಕೊಟ್ಟಿದ್ದಾರೆ

Leave a Reply

Your email address will not be published. Required fields are marked *