ಮೈಸೂರು: ಮಾನಸ ಗಂಗೋತ್ರಿ ಸಮೀಪದಲ್ಲಿ ಇರುವ ಕಲಾಮಂದಿರದಲ್ಲಿ ಮಹಿಷ ದಸರಾ ಆಚರಣ ಸಮಿತಿ ಹಾಗು ಮೈಸೂರು ವಿಶ್ವವಿದ್ಯಾಲಯ ಸಂಶೋಧಕರ ಸಂಘ ಇವರ ಆಶ್ರಯದಲ್ಲಿ ನಡೆದ ಮಹಿಷ ದಸರಾ ಆಚರಣೆ ಕುರಿತು ಒಂದು ದಿನದ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು. ರಾಜ್ಯದ ಸಾಹಿತಿಗಳು ಬರಹಗಾರರು ಲೇಖಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದೆ ವೇಳೆ ವೇದಿಕೆ ಕುರಿತು ಮಾತನಾಡಿದ ಬಹುಜನ ಚಿಂತಕರು ಡಾ ದಿಲೀಪ್ ನರಸಯ್ಯ ಅವರು ಇಷ್ಟು ವರ್ಷಗಳ ಕಾಲ ನಮಗೆ ಮಹಿಷ ರಾಕ್ಷಸ ನರಬಕ್ಷಕ ಕೆಟ್ಟವನು ಅಂತ ನಮಗೆ ಸುಳ್ಳು ಹೇಳಿ ಈ ಬ್ರಾಹ್ಮಣರು ನಮ್ಮನ್ನು ನಂಬಿಸಿದ್ದರು. ಆದರೆ ಮಹಿಷ ಎನ್ನುವುದು ಮೂಲನಿವಾಸಿಗಳ ರಾಜ ಸಮಾಜ ಸುಧಾರಕ ಜನಸೇವಕ ಬೌದ್ಧ ಬಿಕ್ಕು ಅಂತ ಹಲವಾರು ಶಾಸನಗಳು ಇತಿಹಾಸಕರರ ಮೂಲಕ ನಮಗೆ ತಿಳಿದಿದೆ ಮಹಿಷ ದೊರೆ ದ್ರಾವಿಡ ರಾಜ ಎಂದು ತಿಳಿಯುತ್ತೆ. ಒಳ್ಳೆ ಆಡಳಿತ ನೀಡುತ್ತಿದ್ದ ದ್ರಾವಿಡ ರಾಜರು. ಜನರ ಕಷ್ಟ ಸುಖಗಳನ್ನು ಅರಿಯುತ್ತಿದ್ದ ನಿಜವಾದ ರಾಜ ಅಸುರರು ಜನರ ನಾಯಕ ಎಂದು ಕರೆಸಿಕೊಂಡ ಏಕೈಕ ನಾಯಕ ಮಹಿಷ ರಾಜ. ಅಂದಿನ ಕಾಲದಲ್ಲೇ ಅರಣ್ಯ ಸಂರಕ್ಷಣೆ ಮಾಡಿ ಉತ್ತಮ ನಾಯಕ ಎಂದು ಹೆಸರು ಪಡೆದ ರಾಜ ಮಹಿಷರು ಬ್ರಾಹ್ಮಣರ ಮೌಢ್ಯ ಆಚರಣೆ ಮತ್ತು ಕುತಂತ್ರ ತಂತ್ರಗಳನ್ನು ಆಧಾರ್ಮಿಕತೆಯನ್ನು ತಡೆಯಲು ಬಂದ ರಾಜನನ್ನು ಸಹಿಸಲಾರದೆ ಬ್ರಾಹ್ಮಣರು ಕೊಂದರು.

ಈ ಚಾಮುಂಡಿ ಸಂಹಾರ ಮಾಡಿದ ಎನ್ನುವುದು ಸುಳ್ಳು ಸುದ್ದಿ ಮಹಿಷ ರಾಜರನ್ನು ವಿವಿಧ ಸಂಘ ಪರಿವಾರದವರು ಬರೆದಿರುವ ಪುಸ್ತಕಗಳಲ್ಲಿ ವಿಚಿತ್ರವಾಗಿ ಬಿಂಬಿಸಿ ಮಹಿಷ ರಾಜನ ಮೇಲೆ ಕೆಟ್ಟ ಅಭಿಪ್ರಾಯ ಬರುವ ಹಾಗೆ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ಅಂದಿನ ಕಾಲದಲ್ಲಿ ಹಳೆ ಮೈಸೂರು ಪ್ರಾಂತ್ಯದ ಜನರುಗಳು ಹಾವು ಕಚ್ಚಿದವರು ಮಹಿಷ ಮಂಡಲಕ್ಕೆ ಮೈಸೂರಿಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದರು.

ಅಂತಹ ಸಾಮಾಜಿಕ ಪ್ರಸಿದ್ದಿ ಪಡೆದ ತಾಣ ನಮ್ಮ ಮಹಿಷನ ಊರು. ಚಂದಿಗಡ ಬಿಹಾರ್ ಗುಜರಾತ್ ಮಧ್ಯಪ್ರದೇಶ ಕರ್ನಾಟಕ ಜಾರ್ಕoಡ್ ಮಹಾಬಲ ಅನ್ನುವ ಊರುಗಳಿವೆ ಸಮತಾ ಸೈನಿಕ ದಳ ದಿಂದ ಎಲ್ಲಾ ರಾಜ್ಯಗಳಲ್ಲೂ ಮಹಿಷ ದೊರೆಯ ಹಬ್ಬ ಮಾಡಿದ್ದಾರೆ. ಮಾಡುತ್ತ ಕೂಡ ಇದ್ದಾರೆ. ಮಧ್ಯ ಏಷ್ಯದಿಂದ ಭಾರತಕ್ಕೆ ದನ ಮೇಯಿಸಲು ಬಂದ ಬ್ರಾಹ್ಮಣರು ಎಲ್ಲವನ್ನು ನಾಶ ಮಾಡಿದ್ದಾರೆ ಇದೆಲ್ಲವನ್ನು ನೋಡಿ ಗಮನಿಸಿದರೆ ಸಾಕು ಈ ಭಾರತ ವನ್ನು ಆಳಿದ ಸೂರರು ಈ ದೇಶದ ಮೂಲನಿವಾಸಿಗಳು ಅದರಲ್ಲಿ ನಮ್ಮ ರಾಜ ಮಹಿಷನೂ ಕೂಡ ಇದ್ದ ಎಂಬುದು ನಮ್ಮೆಲ್ಲರಿಗೂ ತಿಳಿಯುತ್ತದೆ.ನಮ್ಮ ಎಲ್ಲಾ ಪೂರ್ವಜರ ಇತಿಹಾಸ ವನ್ನು ಬಾಬಾಸಾಹೇಬರು ತಿಳಿಸಿಕೊಟ್ಟಿದ್ದಾರೆ ಇನ್ನು ಎಸ್ಟೆಷ್ಟೋ ಇತಿಹಾಸವನ್ನು ಮುಚ್ಚಿಟ್ಟಿದ್ದಾರೆ ಬಾಬಾಸಾಹೇಬರ ಬರೆದಿದ್ದ ಲಕ್ಷಾಂತರ ಪುಸ್ತಕಗಳನ್ನು ಬ್ರಾಹ್ಮಣರು ಸುಟ್ಟು ಹಾಕಿದ್ದಾರೆ. ಆಗಾಗಿ ಸತ್ಯ ಮತ್ತು ಇತಿಹಾಸ ಓದಬೇಕು ತಿಳಿದುಕೊಳ್ಳಬೇಕು ಎಂದು ಹೇಳಿದರು.

ವರದಿ :- ನಾಗೇಂದ್ರ ಪ್ರಸಾದ್, ಮೈಸೂರು

Leave a Reply

Your email address will not be published. Required fields are marked *