ನೊಬೆಲ್ ಶಾಂತಿ ಪ್ರಶಸ್ತಿಗೆ ಮೋದಿಯವರು ಸ್ಪರ್ಧೆಯಲ್ಲಿ ಇದ್ದಾರೆಂಬ ಸುದ್ದಿ ನಿನ್ನೆಯಿಂದ ಚಾಲ್ತಿಯಲ್ಲಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ರೀತಿಯಲ್ಲಿ ಚರ್ಚೆಯಾಗುತ್ತಿದೆ. ಇದರ ನಡುವೆ ಕನ್ನಡದ ನಟ ಮತ್ತು ಹೋರಾಟಗಾರ ಚೇತನ್ ಅಹಿಂಸಾ ವ್ಯಂಗ್ಯವಾಡಿದ್ದು, ʼಒಬಾಮಾ ಅವರು ನೊಬೆಲ್ ‘ಶಾಂತಿ’ ಪ್ರಶಸ್ತಿಯನ್ನು ಪಡೆಯಲು ಸಾಧ್ಯವಾದರೆ, ಮೋದಿಯವರನ್ನು ತಳ್ಳಿಹಾಕಬೇಡಿʼ ಎಂದು ನಗುವಿನ ಎಮೋಜಿ ಹಾಕಿ, ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.