ಚಿಕ್ಕಬಳ್ಳಾಪುರಕ್ಕೂ BMTC ಬಸ್‌ ಸಂಪರ್ಕ ಕಲ್ಪಿಸಿರುವ ಬಗ್ಗೆ ಆರೋಗ್ಯ ಸಚಿವ ಸುಧಾಕರ್‌ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹರ್ಷ ವ್ಯಕ್ತಪಡಿಸಿ, ಅದನ್ನು ʼಯುಗಾದಿಯ ಕೊಡುಗೆʼ ಎಂದು ಕೊಂಡಾಡಿದ್ದಾರೆ.

ಚಿಕ್ಕಬಳ್ಳಾಪುರ ಜನತೆಗೆ ಯುಗಾದಿ ಕೊಡುಗೆ!

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ಚಿಕ್ಕಬಳ್ಳಾಪುರಕ್ಕೆ ವಿಸ್ತರಿಸುವ ಜಿಲ್ಲೆಯ ಜನತೆಯ ಬಹುನಿರೀಕ್ಷಿತ ಬೇಡಿಕೆಯಂತೆ ಬಿಎಂಟಿಸಿ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲಾಗಿದ್ದು, ಇನ್ನು ಮುಂದೆ ಬಿಎಂಟಿಸಿ ಬಸ್ಸುಗಳು ನಮ್ಮ ಚಿಕ್ಕಬಳ್ಳಾಪುರಕ್ಕೂ ಸಂಚರಿಸಲಿವೆ.

ರೈತರು, ವಿದ್ಯಾರ್ಥಿಗಳು, ಸಣ್ಣ ವ್ಯಾಪಾರಸ್ಥರು, ಉದ್ಯೋಗಿಗಳು ಸೇರಿದಂತೆ ದಿನನಿತ್ಯ ಬೆಂಗಳೂರಿಗೆ ಓಡಾಡುವ ಚಿಕ್ಕಬಳ್ಳಾಪುರದ ಎಲ್ಲ ನಾಗರಿಕರಿಗೂ ಇದರಿಂದ ಅನುಕೂಲವಾಗಲಿದ್ದು, ಜಿಲ್ಲೆಯ ಆರ್ಥಿಕ ಪ್ರಗತಿಗೂ ವೇಗ ದೊರೆಯಲಿದೆ.

ಚಿಕ್ಕಬಳ್ಳಾಪುರದ ಜನತೆಯ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಶ್ರೀ Basavaraj Bommai ಹಾಗೂ ಸಾರಿಗೆ ಸಚಿವ ಶ್ರೀ B Sriramulu ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಕೃತಜ್ಞತೆಗಳು.

ಈ ಬೇಡಿಕೆಯನ್ನು ಸಾಕಾರಗೊಳಿಸಲು ಶ್ರಮಿಸಿದ ಬಿಎಂಟಿಸಿ ಉಪಾಧ್ಯಕ್ಷರಾದ ಶ್ರೀ ನವೀನ್ ಕಿರಣ್ ಅವರಿಗೆ ಅಭಿನಂದನೆಗಳು.

ಎಂದು ಸುಧಾಕರ್‌ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಆದರೆ, BMTCಯ ವ್ಯವಸ್ಥಾಪಕ ನಿರ್ದೇಶಕರು ತಮ್ಮ ಆದೇಶದ ಪತ್ರದಲ್ಲಿ ಪ್ರಾಯೋಗಿಕವಾಗಿ ಎರಡು ಎ ಸಿ ಬಸ್‌ಗಳನ್ನು ಓಡಿಸಲು ಸೂಚಿಸಿದ್ದಾರೆ. ಇದರ ಅರ್ಥ, ಇದೊಂದು ವಿಫಲ ಮತ್ತು ಜನಗಳ ಕಣ್ಣಿಗೆ ಮಣ್ಣೆರೆಚುವ ತಂತ್ರ. ಯಾಕೆಂದರೆ, ಈ ಪ್ರಾಯೋಗಿಕ ಎ ಸಿ ಬಸ್‌ಗಳನ್ನು ಬಳಸುವವರು ಯಾರು? ಬಡವರು ಬಳಸಲು ಸಾಧ್ಯವೇ? ಈಗಾಗಲೇ ಟೋಲ್‌ ನೆಪದಲ್ಲಿ ಜನರನ್ನು ದೋಚುತ್ತಿರುವ ಸರ್ಕಾರ, ಎ ಸಿ ಬಸ್‌ಗಳನ್ನು ಚಿಕ್ಕಬಳ್ಳಾಪುರದಂತೆ ಹಿಂದುಳಿದ ಜಿಲ್ಲೆಗೆ ಬಿಟ್ಟು, ಅದನ್ನು ಬೇಕಂತಲೇ ಫೇಲ್‌ ಮಾಡಿ, ಯೋಜನೆ ವಿಫಲವಾಗಿದೆ ಎಂದು ಹೇಳುವುದೇ ಆಗಿದ್ದು, ಈ ಬಿಜೆಪಿ ಸರ್ಕಾರ ಜನಕ್ಕೆ ಹೋಳಿಗೆಯಲ್ಲಿ ಬೇವಿನ ಕಹಿಯನ್ನು ಇಟ್ಟಿದೆ ಎಂದು ಹೇಳಬಹುದು.

Leave a Reply

Your email address will not be published. Required fields are marked *