ಛತ್ತರ್‌ಪುರ್ (ಮಧ್ಯಪ್ರದೇಶ): ಮುಸುಕುಧಾರಿ ಗೂಂಡಾಗಳು ಶಾಲೆಗೆ ನುಗ್ಗಿ ಶಿಕ್ಷಕರನ್ನ, ವಿದ್ಯಾರ್ಥಿಗಳನ್ನು ಥಳಿಸಿರುವ ಘಟನೆಯು ಮಧ್ಯಪ್ರದೇಶದ ಬಮಿತಾ ಪ್ರದೇಶದ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದಿರುವುದು ತಿಳಿದುಬಂದಿದೆ.
ಈ ಘಟನೆಯು ಶಾಲೆಯ ಸಿಸಿ ಟಿವಿ ಕ್ಯಾಮರದಲ್ಲಿ ಸೆರೆಯಾಗಿದ್ದು, ಶಾಲೆಯ ಆಡಳಿತ ಮಂಡಳಿ ಬಮಿತಾ ಪೊಲೀಸರಿಗೆ ದೂರನ್ನು ನೀಡಿದ್ದಾರೆ.
ಕಂಪ್ಯೂಟರ್ ಆಪರೇಟರ್ ಅನಿರುದ್ ಶುಕ್ಲಾ ಅವರ ಮೋಟಾರ್ ಬೈಕ್ ರಿಪೇರಿ ಮಾಡುವ ಮೆಕಾನಿಕ್ ಶಾಫಿಗೆ, ಬೈಕ್ ರಿಪೇರಿ ಮಾಡುವ ಮೊದಲೇ ಹಣ ತೆಗೆದುಕೊಂಡು ಬೈಕ್ ಕೊಡದಿದ್ದ ಕಾರಣ, ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಶುಕ್ಲಾರಿಗೆ ತಕ್ಕ ಪಾಠ ಕಲಿಸಲು ಹುಡುಗರು ಹೀಗೆ ಮಾಡಿದ್ದಾರೆ ಎಂದು ಇನ್ಸ್ಪೆಕ್ಟರ್ ಪರಶುರಾಮ್ ದಬರ್ ತಿಳಿಸಿದ್ದಾರೆ.