ಮಂಡ್ಯ : ಬ್ರಾಹ್ಮಣರ ವಿರುದ್ದ ನೀಡಿರುವ ವಿವಾದಾತ್ಮಕ ಹೇಳಿಕೆಯ ಬಗ್ಗೆ ರಾಜಕೀಯದ ವಿವಿಧ ನಾಯಕರು ವಾಗ್ಧಾಳಿಯನ್ನ ನಡೆಸುತ್ತಿದ್ದು ಈ ಹೇಳಿಕೆಯ ಬಗ್ಗೆ ಪೇಜಾವರ ಶ್ರೀಗಳು ಕೂಡಾ ಪ್ರತಿಕ್ರಿಯೆ ನೀಡಿದ್ದಾರೆ.
ಮಂಡ್ಯದ ಮದ್ದೂರಿನ ಶ್ರೀ ಹೊಳೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹೆಚ್ ಡಿ. ಕುಮಾರಸ್ವಾಮಿ ಬ್ರಾಹ್ಮಣರ ಬಗ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಪೇಜಾವರ ಶ್ರೀಗಳು,ಈ ಹಿಂದಿನಿಂದಲೂ ಬ್ರಾಹ್ಮಣರ ಬಗ್ಗೆ ಈ ರೀತಿಯ ಮಾತುಗಳು ಕೇಳಿಬರುತ್ತಿವೆ. ಪ್ರತಿ ವರ್ಷ ಚುನಾವಣೆ ಬಂದಾಗಲೂ ಈ ರೀತಿಯ ಹೇಳಿಕೆಗಳು ಹೆಚ್ಚೆಚ್ಚು ಕೇಳಿಬರುತ್ತವೆ. ಈ ಹೇಳಿಕೆಯ ಪರವಾಗಿ ಮಾತನಾಡುವವರು ಯಾರೂ ಇಲ್ಲದಂತಾಗಿದೆ ಏಕೆಂದರೆ ನಮ್ಮಲ್ಲಿ ಸಂಖ್ಯಾಬಲ ಇಲ್ಲ ಸಂಖ್ಯಾಬಲ ಹೆಚ್ಚಿರುವವರು ಏ ಮಾಡಿದ್ರೂ ನಡೆಯುತ್ತೆ ಮಾತನಾಡುತ್ತಾರೆ ಏನಾದ್ರೂ ಆರೋಪ ಮಾಡುವುದಾದರೆ ಪುರಾವೆ ಇಟ್ಟುಕೊಂಡು ಮಾಡಲಿ ಎಂದು ಕಿಡಿಕಾರಿದ್ದಾರೆ.