ವಿಜಯಪುರ:ರಾಜಕೀಯ ಕ್ಷೇತ್ರದ ಕೆಲವರು ಸಿದ್ದರಾಮಯ್ಯ ಜನರಿಗೆ ಏನು ಮಾಡಿದ್ದಾರೆ ಎಂದು ಪ್ರಶ್ನೆ ಮಾಡುತ್ತಾರೆ, ಆ ರೀತಿಯ ಟೀಕೆಗಳಿಗೆ ನಾನು ತಲೆ ಕೆಡಿಸಿಕೊಳ್ಳುವ ಜಾಯಮಾನ ನನ್ನದಲ್ಲ. ನಾನು ರಾಜಕೀಯ ಕ್ಷೇತ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ನಾನು ಜನರ ಪರವಾಗಿ ಕೆಲಸ ಮಾಡುತ್ತಿದ್ದೇನೆ, ಸೋತಾಗ ಹೆದರಿ ಕೂರಲಿಲ್ಲ ಆಗಲೂ ಜನರ ಪರವಾಗಿ ಕೆಲಸ ಮಾಡುತ್ತಿದ್ದೆ, ಸೋಲು-ಗೆಲುವುವಿನ ಬಗ್ಗೆ ನನಗೆ ಚಿಂತೆಯಿಲ್ಲ ಜನರ ಪರವಾಗಿ ಕೆಲಸಗಳನ್ನು ಮಾಡಿದ್ದೆನೆ ಎನ್ನುವ ತೃಪ್ತಿ ನನಗಿದೆ ಎಂದು ಹೇಳಿದ್ದಾರೆ
ಇಂದು ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಸುಕ್ಷೇತ್ರ ಮೈಲಾರದಲ್ಲಿ ಯಾತ್ರಿ ನಿವಾಸ ಉದ್ಘಾಟಿಸಿ,ಸುಮ್‌ಸುಮ್ಮನೆ ನನ್ನನ್ನು ಹೆದರಿಸಲು ಬಂದರೆ ನಾನು ಹೆದರೋದಿಲ್ಲ ಬದಲಾಗಿ ಎದುಗಿರುವವರೊಂದಿಗೆ ಹೋರಾಟ ಮಾಡಲು ತೊಡೆ ತಟ್ಟಿ ನಿಲ್ಲುವ ದೈರ್ಯವಿದೆ ಎಂದು ಸವಾಲನ್ನು ಹಾಕಿದ್ದಾರೆ.