ಮೈಸೂರು: ಮೂರು ಕ್ಷೇತ್ರಗಳ ಗೆಲುವು ಜನ ಸಿದ್ದರಾಮಯ್ಯನವರಿಗೆ ನೀಡಿದ ತೀರ್ಪು ಅಲ್ಲ ಈ ತೀರ್ಪಿನಿಂದ ಸಿದ್ದರಾಮಯ್ಯನವರ ಪಕ್ಷದ ಹಗರಣಗಳೇನು ಮುಚ್ಚಿಹೋಗುವುದಿಲ್ಲವೆಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲು ಸಾಧಿಸಿರುವುದರ ಬಗ್ಗೆ ಪ್ರತಿಕ್ರಿಯಿಸಿದ ವಿಶ್ವನಾಥ್‌ರವರು, ಸಿದ್ದರಾಮಯ್ಯನವರ ಆಡಳಿತಕ್ಕೆ ಜನ ತಲೆದೂಗಿ ನೀಡಿರುವ ತೀರ್ಪಲ್ಲ, ಇದರಿಂದ ಅವರ ಹಗರಣಗಳೇನೂ ಮುಚ್ಚಿಹೋಗುವುದಿಲ್ಲ.ಗೆಲುವನ್ನು ಸಾಧಿಸಿದ್ದೇವೆ ಎಂದು ಬೀಗುವ ಅಗತ್ಯವಿಲ್ಲವೆಂದು ಕಿಡಿಕಾರಿದ್ದಾರೆ.
ಈ ಚುನಾವಣೆಯು ಹೆಂಡ,ದುಡ್ಡು,ತುಂಡು, ಈ ರೀತಿಯ ವಿಷಯಗಳ ಮೇಲೆ ನಡೆಯುವುದು. ಅದೇ ರೀತಿಯಲ್ಲಿಯೇ ಈ ಬಾರಿಯು ನಡೆದಿದೆ.ಮುಡಾ ಪ್ರಕರಣ ಮೈಸೂರಿನ ವ್ಯಾಪ್ತಿಯಲ್ಲಿ ಬರುತ್ತದೆ.ಅಲ್ಲಿ ಅವರ ಬೇಳೆ ಬೇಯಿಸಿಕೊಳ್ಳೊದು ಸ್ವಲ್ಪ ಕಷ್ಟ.ಸಿದ್ದರಾಮಯ್ಯನ ಸರ್ಕಾರಲಕ್ಕೆ ಜನರು ನೀಡಿರುವ ತೀರ್ಪಲ್ಲ. ಉಪಚುನಾವಣೆ ಹೇಗೆ ನಡೆದಿದೆ ಎಂದು ಎಲ್ಲರಿಗೂ ತಿಳಿದಿರುವ ವಿಚಾರವೇ ಎಂದು ವಾಗ್ದಾಳಿ ನಡೆಸಿದ್ದಾರೆ.