1995ರಲ್ಲಿ ಬಿಹಾರದಲ್ಲಿ ನಡೆದ ಚುನಾವಣೆಯ ಮತದಾನದ ದಿವಸ ಇಬ್ಬರನ್ನು ಹತ್ಯೆಗೈದ ಆರೋಪದಲ್ಲಿ ಮಾಜಿ ಸಂಸದ ಮತ್ತು RJD ಮುಖಂಡ ಪ್ರಭುನಾಥ್‌ ಸಿಂಗ್‌ ಮಾಡಿರುವ ಅಪರಾಧವನ್ನು ಸಾಬೀತುಪಟ್ಟ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಜೀವಾವಧಿ ಶಿಕ್ಷೆಯನ್ನು ವಿದಿಸಿ ಆದೇಶಿಸಿದೆ. ಸಿಂಗ್ ಈಗಾಗಲೇ ಮತ್ತೊಂದು ಕೊಲೆ ಪ್ರಕರಣದಲ್ಲಿ ಜಾರ್ಖಂಡ್‌ನ ಹಜಾರಿಬಾಗ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ.

ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಎಸ್ ಓಕಾ ಮತ್ತು ವಿಕ್ರಮ್ ನಾಥ್ ಅವರ ಪೀಠವು ಸಿಂಗ್ ಮತ್ತು ಬಿಹಾರ ಸರ್ಕಾರಕ್ಕೆ ತಲಾ ₹10 ಲಕ್ಷ ಮತ್ತು ಪ್ರತ್ಯೇಕವಾಗಿ ಮೃತರ ಇಬ್ಬರು ಸಂತ್ರಸ್ತರ ಕುಟುಂಬಗಳಿಗೆ ಮತ್ತು ಪ್ರಕರಣದಲ್ಲಿ ಗಾಯಗೊಂಡ ಸಂತ್ರಸ್ತರಿಗೆ ತಲಾ ₹5 ಲಕ್ಷ ಪರಿಹಾರ ನೀಡುವಂತೆ ಸೂಚಿಸಿದೆ.

1995ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಈ ಮಾಜಿ ಸಂಸದನನ್ನು ಸೋಲಿಸಿದ ಶಾಸಕ ಅಶೋಕ್ ಸಿಂಗ್ ಅವರ 1995ರ ಕೊಲೆಗೆ ಸಂಬಂಧಿಸಿದಂತೆ 2017ರಲ್ಲಿ ವಿಚಾರಣಾ ನ್ಯಾಯಾಲಯವು ಅವರನ್ನು ದೋಷಿ ಎಂದು ಘೋಷಿಸಿತ್ತು. ಚುನಾವಣಾ ಫಲಿತಾಂಶ ಬಂದ 90 ದಿನಗಳಲ್ಲಿ ಶಾಸಕ ಅಶೋಕ್‌ ಸಿಂಗ್‌ ಅವರನ್ನು ಕೊಲೆ ಮಾಡುವುದಾಗಿ ಪ್ರಭುನಾಥ್ ಸಿಂಗ್ ಬೆದರಿಕೆ ಹಾಕಿದ್ದ.

Leave a Reply

Your email address will not be published. Required fields are marked *