ನೀರು ಮಾರಾಟದ ಮಾಫಿಯಾ, ಮಿನರಲ್ (ಬಿಸ್ಲೆರಿ) ವಾಟರ್ ಕುಡಿಯುವವರಿಗೆ ಆಗುವ ಅಪಾಯವನ್ನು, ಅದರ ಹಿಂದಿರುವ ಕರಾಳತೆಯನ್ನು ತಮಿಳಿನ ಸರ್ದಾರ್ ಸಿನಿಮಾ ಬೆತ್ತಲುಗೊಳಿಸುತ್ತದೆ. ಈ ಸಿನಿಮಾ ನೋಡಿತ್ತಿದ್ದಾಗ ನಮ್ಮ ಮೌನ ಪ್ರತಿಭಟನಾಕಾರ ಆಂಬ್ರೋಸ್ ನೆನಪಿಗೆ ಬಂದರು. ಈ ಸಿನಿಮಾ ಬಂದಿರುವುದು ಈ ತಿಂಗಳು… ನಮ್ಮ ಆಂಬ್ರೋಸ್ ಈ ನೀರು ಮಾರಾಟದ ವಿರುದ್ಧ ಕಳೆದ ಹತ್ತು ವರ್ಷಗಳಿಗೂ ಹೆಚ್ಚಿನ ಕಾಲದಿಂದ ಮಾತು ನಿಲ್ಲಿಸಿ ಪ್ರತಿಭಟಿಸುತ್ತಿದ್ದಾರೆ. ಪಬ್ಲಿಕ್ ಟಾಯ್ಲೆಟ್‌ಗಳಲ್ಲಿ ಸಿಗುವ ನೀರು ಕುಡಿಯುತ್ತಾ ಗಟ್ಟಿಮುಟ್ಟಾಗಿ ಓಡಾಡುತ್ತಿರುವ ಸಂತ ಆತ.
ಇಂಥಹ ಜಾಗತಿಕ ಸಮಸ್ಯೆ ಇಟ್ಟುಕೊಂಡು ಸಿನಿಮಾ ಮಾಡಲು ಬಹುಶಃ ತಮಿಳು ಮತ್ತು ಮಲಯಾಳಿಗಳಿಗೆ ಮಾತ್ರ ಸಾಧ್ಯವೆನಿಸುತ್ತದೆ. ಸಿನಿಮಾ ರೋಚಕವಾಗಿದೆ ತಪ್ಪದೇ ನೋಡಿ.