ರೈಲು ನಿಲ್ದಾಣದ ಮೇಲ್ವೇತುವೆಯ ಸ್ಲಾಬ್‌ಗಳು ಬಿದ್ದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಚಂದ್ರಾಪುರದಲ್ಲಿ ನಡೆದಿದೆ.
ನಿನ್ನೆ ಸಂಜೆ ಸರಿಯಾಗಿ 5.10ಕ್ಕೆ ಮಹಾರಾಷ್ಟ್ರದ ಚಂದ್ರಾಪುರ ವ್ಯಾಪ್ತಿಯ ಬಲ್ಹರ್‌ಶಾ ರೈಲ್ವೇ ನಿಲ್ದಾಣದ ಮೇಲ್ವೇತುವೆ ಹೊದಿಸಲಾಗಿದ್ದ ಸ್ಲಾಬ್‌ಗಳು ಹಠಾತ್ತನೇ ಕುಸಿದುಬಿದ್ದಿವೆ. ಈ ಘಟನೆಯಲ್ಲಿ 48 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಜತೆಗೆ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ನಡುವೆ ರೈಲ್ವೇ ಇಲಾಖೆಯು ಮೃತಪಟ್ಟವರಿಗೆ 1 ಲಕ್ಷ, ಗಾಯಗೊಂಡವರಿಗೆ 50 ಸಾವಿರ ಪರಿಹಾರ ಘೋಷಿಸಿದ್ದು, ಇದು ಅತ್ಯಂತ ಅಗ್ಗದ ಪರಿಹಾರವೆಂಬ ಟೀಕೆಗೆ ಕಾರಣವಾಗಿದೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.

Leave a Reply

Your email address will not be published. Required fields are marked *