ಮೊಬೈಲ್ ಪೋನ್ ಎಂದರೆ ಯಾರಿಗೆ ತಾನೇ ಇಷ್ಟವಿರುವುದಿಲ್ಲ. ಅದರಲ್ಲಂತೂ ಮಕ್ಕಳಿಗೆ ಅಚ್ಚುಮೆಚ್ಚಿನ ಗ್ಯಾಜೆಟ್ ಇದಾಗಿರುತ್ತದೆ. ಬನ್ನಿ ಮೊಬೈಲ್ ಪೋನ್ ಬಳಕೆಯಿಂದ ಏನೆಲ್ಲಾ ಸಮಸ್ಯೆಗಳು ಉಂಟಾಗುತ್ತವೆ ಎಂಬುದನ್ನು ನೋಡೊಣ.
ಅಂದಿನ ಕಾಲದಲ್ಲಿ ಯಾರದ್ದೊ ಒಬ್ಬರ ಮನೆಯಲ್ಲಿ ಹಳೇ ಕಾಲದ ವೈಟ್ ಆಂಡ್ ಬ್ಲಾಕ್ ಟಿವಿ ಇರುತ್ತಿತ್ತು. ಏರಿಯಾದಲ್ಲಿ ಅಥವಾ ಬೀದಿಯಲ್ಲಿ ಒಂದು ಮನೆಯಲ್ಲಿ ಟಿವಿ ಇದ್ದರೆ ಊರಿನವರೆಲ್ಲಾ ಟೆಂಟಿನಲ್ಲಿ ಸಿನಿಮಾ ನೋಡುವ ರೀತಿಯಲ್ಲೇ ನೂಕು ನುಗ್ಗಲಿನ ರೀತಿಯಲ್ಲಿ ಒಬ್ಬರನನೊಬ್ಬರು ನೂಕಾಡಿಕೊಂಡು ದೂರದಿಂದ ಟಿವಿಯನ್ನು ನೋಡುತ್ತಿದ್ದರು.
ಈಗ ಯಾಕೆ ಈ ವಿಷಯ ಹೇಳುತ್ತಿದ್ದೇನೆ, ಎಂದರೆ ಈಗ ಎಲ್ಲರ ಮನೆಯಲ್ಲೂ ವಿವಿಧ ಬಗೆಯ ಟಿವಿಗಳು ಇರುತ್ತವೆ .ಕಡು ಬಡವರ ಮನೆಯಲ್ಲೂ ಟಿವಿ ಇದ್ದೇ ಇರುತ್ತದೆ. ಟಿವಿ ಇಲ್ಲದವರ ಮನೆಗಳು ಸಿಗುವುದು ತುಂಬಾ ಅಪರೂಪ.
ಮನೆಯಲ್ಲಿರುವ ಟಿವಿಯನ್ನು ತಕ್ಕಮಟ್ಟಿಗೆ ಸ್ವಲ್ಪದೂರದಿಂದಲೇ ನೋಡುತ್ತಾರೆ. ಅದೆ ರೀತಿ ಕಂಪ್ಯೂಟರ್ಗಳು ಬಂದಿವೆ ಕಂಪ್ಯೂಟರ್ ಮಾನಿಟರ್ನ್ನು ನಿರಂತರವಾಗಿ ನೋಡುವುದರಿಂದ ತಲೆನೋವು, ಕಣ್ಣು ನೋವಿನಂತಾ ಸಮಸ್ಯೆಗಳು ಬರುತ್ತವೆ ಅದಕ್ಕೆ ಪರ್ಯಾಯವಾಗಿ ಸ್ಪೆಕ್ಸ್ ಹಾಕಿಕೊಂಡು ಇನ್ಯಾವುದೊ ಮುಂಜಾಗ್ರತೆಯ ಕ್ರಮಗಳನ್ನು ಕೈಗೊಂಡು ಕೆಲಸ ಮಾಡುತ್ತಿರುತ್ತಾರೆ.
ಟಿ.ವಿ.ಕಂಪ್ಯೂಟರಿಗಿಂತ ಈ ಮೊಬೈಲ್ ಫೋನ್ ಹೆಚ್ಚು ಪರಿಣಾಮವನ್ನು ಬೀರುತ್ತಿದೆ ಈ ಜನರೇಷನ್ ಮಕ್ಕಳಲ್ಲಿ ಎಂದರೆ ತಪ್ಪಾಗಲಾರದು.
ಮಕ್ಕಳಿಗೆ ಊಟ ಮಾಡಿಸಲು ಕೆಲವು ತಾಯಂದಿರು ಮೊಬೈಲ್ ಪೋನಿನಲ್ಲಿ ಕಾರ್ಟೂನ್ ಚಾನೆಲ್ ಹಾಕಿ ಊಟ ಮಾಡಿಸುತ್ತಾರೆ. ದಿನ ಕಳೆಯುತ್ತಾ ಮಗು ಆ ಮೊಬೈಲ್ ಫೋನಿಗೆ ಅಡಿಕ್ಟ್ ಆಗಿಬಿಟ್ಟಿರುತ್ತದೆ. ಮತ್ತೆ ಮೊಬೈಲ್ಫೋನಿನಲ್ಲಿ ವಿಡಿಯೋ ಹಾಕಿದ್ರೆ ಮಾತ್ರ ಮಗು ಊಟ ಮಾಡುತ್ತದೆ.
ಮೊಬೈಲ್ ಪೋನು ಆ ಮಗುವಿನ ಮನಸಿನ ಮೇಲೆ ಹೇಗೆ ಪರಿಣಾಮವನ್ನು ಬೀರಿರುತ್ತದೆ ಎಂದರೆ ಮೊಬೈಲ್ ಕೊಟ್ರೆ ಎನು ಬೇಕಾದರೂ ಮಾಡುತ್ತೇನೆ, ನೀನು ಹೇಳಿದ ಮಾತು ಕೇಳುತ್ತೇನೆ ಎಂದು ಹೇಳುತ್ತದೆ.
ಮಗು ಯಾವಾಗ್ಲೂ ಫೋನ್ ನೋಡುತ್ತಿರುತ್ತದೆ. ಎಷ್ಟರ ಮಟ್ಟಿಗೆ ಎಂದರೆ ರಾತ್ರಿ ಮಲಗುವಾಗಲೂ ಕೂಡಾ ಮೊಬೈಲ್ ಪೋನಿನಲ್ಲಿ ಗೇಮನ್ನೋ, ಇಲ್ಲ ಯಟ್ಯೂಬ್ ರೀಲ್ಸ್ ಗಳನ್ನೋ, ಅಥವಾ ಇನ್ಸ್ಟಾಗ್ರಾಂನ್ನು ನೋಡಿಕೊಂಡಿರುತ್ತಾರೆ. ಹೀಗೆ ನೋಡುವುದರಿಂದ ಮಗುವಿಗೆ ಸರಿಯಾಗಿ ನಿದ್ದೆ ಬರದೆ ಲೇಟಾಗಿ ನಿದ್ದೆ ಮಲಗುತ್ತದೆ. ಬೇಳಗ್ಗೆ ಎದ್ದಾಗ ಅದಕ್ಕೆ ನಿದ್ದೆ ಸರಿಯಾಗಿ ಆಗದೆ ತಲೆ ನೋವಿನಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ
ಮಗು ಮಲಗುವ ಸಮಯದಲ್ಲಿ ಸರಿಯಾಗಿ ನಿದ್ದೆ ಮಾಡದೆ ಮೊಬೈಲ್ ನೋಡಿಕೊಂಡಿದ್ರೆ ಆರೋಗ್ಯದ ಪರಿಣಾಮ ಬೀರಿ ನಿದ್ರಾಹೀನತೆಯ ಜೊತೆಗೆ ಒಬೆಸಿಟಿಯಂತಹ ಅಪಾಯಕಾರಿ ಖಾಯಿಲೆಗಳು ಬರುತ್ತವೆ ಎಂದು ವೈದ್ಯರು ನಡೆಸಿದ ಸಂಶೊಧನೆಯಲ್ಲಿ ತಿಳಿದುಬಂದಿದೆ.
ಶೇ.72ರಷ್ಟು ಮಕ್ಕಳು ನಿದ್ದೆ ಮಾಡೋ ಸಮಯದಲ್ಲಿ ಹೆಚ್ಚು ಮೊಬೈಲನ್ನು ಬಳಸುವುದರಿಂದ ನಿದ್ರೆಯ ಕೊರತೆಯುಂಟಾಗಿ ಮಕ್ಕಳ ಮಾನಸಿಕ ಸ್ಥಿತಿಯ ಮೇಲೆ ಹೆಚ್ಚು ಪರಿಣಾಮವನ್ನು ಬೀಳುವುದಲ್ಲದೆ ಮಕ್ಕಳ ಬೆಳವಣಿಗೆಯಯಲ್ಲೂ ಪರಿಣಾಮವನ್ನು ಬೀರುತ್ತದೆ.
ಮೊಬೈಲ್ ಗೀಳಿನಿಂದ ಮಕ್ಕಳಲ್ಲಿ ಇಮ್ಯುನಿಟಿ ಕೊರತೆಯುಂಟಾಗಿ ಬೆಳವಣಿಗೆ ಕುಂಠಿತವಾಗುತ್ತದೆ.
ನೀವು ನೋಡಿರಬಹುದು ಮಗುವಿಗೆ ವಯಸ್ಸು ಹೆಚ್ಚಾಗಿದ್ದರೂ ಬೆಳವಣಿಗೆಯಲ್ಲಿ ಹಿಂದಿರುತ್ತದೆ. ಆ ಮಗುವಿನ ಮನಸ್ಸಿನಲ್ಲಿ ಮೊಬೈಲ್ ಒಂದಿದ್ದರೆ ಊಟ ಬೇಡ, ನಿದ್ದೇ ಬೇಡ, ಮೊಬೈಲ್ ಇದ್ದರೆ ಸಾಕು ಎನ್ನುವ ಅಂಶ ಅಚ್ಚೋತ್ತಿರುತ್ತದೆ.
ಆದ್ದರಿಂದ ಪೋಷಕರು ಆದಷ್ಟು ಮಕ್ಕಳಿಗೆ ನೈಸರ್ಗಿಕವಾದ ಪರಿಸರದ ಪರಿಚಯ ಮಾಡಿಸಿ, ಮನೆಯೇ ಮೊದಲ ಪಾಠಶಾಲೆ ಎನ್ನುವಂತೆ ಆಧುನಿಕವಾಗಿ ಮಾರ್ಕೆಟ್ಟಿಗೆ ಬಂದಿರುವಂತಹ ಮೊಬೈಲ್ನಂತಹ ಉಪಕರಣಗಳ ಕಡೆ ಮನಸ್ಸು ವಾಲದಂತೆ ತಮ್ಮ ಮಗುವಿನ ಮನಸ್ಸಿನಲ್ಲಿ ಆ ವಸ್ತುವಿನಿಂದ ಏನಾಗುತ್ತದೆ ಅದರೆ ಉಪಯೋಗಗಳೇನು? ಅದರಿಂದಾಗುವ ದಷ್ಪರಿಣಾಮಗಳೇನು? ಎಂಬುದನ್ನು ಮಗುವಿಗೆ ಮನದಟ್ಟಾಗುವಂತೆ ತಿಳಿಸಿ ಹೇಳಬೇಕು.
ಮೊದಲೇ ಹೇಳಿದ ಹಾಗಿ ತಾಯಿ ಊಟ ಮಾಡಿಸಲು ಸುಲಭವಾಗುತ್ತದೆ ಎಮದು ಸುಲಭದ ದಾರಿಯನ್ನು ಹುಡುಕಿರುವುದರ ಪರಿಣಾಮ ಹೇಗಿರುತ್ತದೆ ಎಂದು ಗೊತ್ತಾಯಿತಲ್ಲಾ ನಾವು ಯಾವ ರೀತಿ ಮಕ್ಕಳಿಗೆ ಅಭ್ಯಾಸ ಮಾಡಿಸಿರುತ್ತೇವೆ ಅದರಂತೆ ಮಕ್ಕಳ ಮನಸ್ಸು ಸಿದ್ದವಾಗಿರುತ್ತದೆ.
ಆದ್ದರಿಂದ ಮಕ್ಕಳೀಗೆ ಚಿಕ್ಕಂದಿನಿಂದಲೇ ಒಳ್ಳೆಯ ವಿಷಯಗಳನ್ನು ತಿಳಿಸುವುದರ ಜೊತೆಗೆ ದರಿಂದಾಗುವ ಪರಿಣಾಮಗಳನ್ನು ತಿಳಿಸಿಕೊಡಿ.
ಮಕ್ಕಳ ಮನಸ್ಸು ಖಾಲಿ ಹಾಳೆಯಿದ್ದಂತೆ ಅದಕ್ಕೆ ನಾವು ಏನನ್ನು ತುಂಬುತ್ತೇವೆಯೋ ಅದೇ ಸೆಟ್ಟಾಗಿರುತ್ತದೆ ಅದ್ದರಿಂದ ಮಕ್ಕಳ ವಿಷಯದಲ್ಲಿ ತುಸು ಹೆಚ್ಚೆ ಕಾಳಜಿಯನ್ನು ವಹಿಸಬೇಕಾಗುತ್ತದೆ.