ರಾಮನಗರ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರನ್ನು ಜಮೀರ್‌ ಅಹ್ಮದ್‌ ಕರಿಯ ಎಂಬ ಪದವನ್ನು ಬಳಕೆ ಮಾಡಿ ಹೇಳಿಕೆ ನೀಡಿರುವ ವಿಚಾರವೂ ಹಲವು ವಿವಾದಗಳಿಗೆ ಕಾರಣವಾಗಿದೆ. ಚನ್ನಪಟ್ಟಣ ಉಪಚುನಾವಣೆಯ ಸಮಯದಲ್ಲಿ ನಾಲಗೆಯನ್ನು ಹರಿ‌ಬಿಟ್ರಾ ಸಚಿವರು ಎನ್ನುವ ಚರ್ಚೆಗಳು ನಡೆಯುತ್ತಿವೆ.
ಚನ್ನಪಟ್ಟಣದಲ್ಲಿ ಗೆಲುವನ್ನು ಸಾಧಿಸಲು ಮೂರು ಪಕ್ಷಗಳು ಜಿದ್ದಿಗೆ ಬಿದ್ದಿದ್ದಾರೆ.ಇನ್ನೇನು ಮತಧಾನಕ್ಕೆ ಒಂದೇ ಒಂದು ದಿನ ಬಾಕಿ ಇದ್ದು, ಲಾಸ್ಟ್‌ ಹಂತದ ಪ್ರಚಾರ ಮಾಡುತ್ತಿದ್ದು, ಆ ಪ್ರಚಾರ ಭರದಿಂದ ಸಾಗುತ್ತಿದ್ದು ಪಕ್ಷ ಪಕ್ಷದ ನಾಯಕರುಗಳು ನಡುವೆ ವಾಕ್ಸಮರ ನಡೆಯುತ್ತಿದೆ. ಜಮೀರ್‌ ಅಹ್ಮದ್‌ರವರು ಮಾತನಾಡುವ ಭರದಲ್ಲಿ ಕುಮಾರಸ್ವಾಮಿಯವರನ್ನು ಅವರ ಬಣ್ಣವನ್ನು ಸೂಚಿಸಿ ಮಾತಾನಾಡಿ ಎಲ್ಲರ ಕೋಪಕ್ಕೆ ಗುರಿಯಾಗಿದ್ದಾರೆ.
ಚನ್ನಪಟ್ಟಣದಲ್ಲಿ ಚುನಾವಣೆ ಪ್ರಚಾರ ನಡೆಸುವಾಗ ಸಚಿವ ಜಮೀರ್‌ ಸಿ.ಪಿ.ಯೋಗೇಶ್ವರ್‌ ಅವರನ್ನು ಹೊಗಳುವ ಭರದಲ್ಲಿ ಕುಮಾರಸ್ವಾಮಿಯವರನ್ನು ಅವಮಾನಿಸಿದ್ದಾರೆ. ಸಿಪಿ ಯೋಗೇಶ್ವರ್‌ ಅವರು ಕಾಂಗ್ರಸ್‌ ಪಕ್ಷದಿಂದ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದ್ದು, ಕೆಲವು ವರ್ಷಗಳ ಹಿಂದೆ ಬಿಜೆಪಿಗೆ ಹೋಗಿದ್ದರು.ಮತ್ತೆ ಜೆಡಿಎಸ್‌ಗೆ ಹೋಗ್ಬೇಕು ಎನ್ನುತ್ತಿದ್ದ ಅವರ, ಬಿಜೆಪಿಗಿಂಗ ಭಯಾನಕ ಪಕ್ಷ ಈ ಜೆಡಿಎಸ್‌ ಎಂದು ಮರಳಿ ಮನೆಗೆ ಬಂದಿದ್ದಾರೆ.ಈ ಹಿಂದೆ ಜೆಡಿಎಸ್‌ನವರು ಹಿಜಾಬ್‌ ಬೇಡ, ಪಜಾಬ್‌ ಬೇಡ ಎಂದಿದ್ದರು.ಆದರೀಗ ಮುಸ್ಲೀಮರ ಮತ ಬೇಕಾ ನಿಮಗೆ ಎಂದು ಪ್ರಶ್ನಿಸಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿಯವರನ್ನು ಕರಿಯ ಎಂದು ವಿವಾದಗಳು ಸೃಷ್ಟಿಯಾದ ನಂತರ ನಾವಿಬ್ಬರೂ ಸ್ನೇಹಿತರು ನಮ್ಮ ನಡುವೆ ಅಷ್ಟರಮಟ್ಟಿಗೆ ಸಲುಗೆಯಿದೆ.ನನ್ನನ್ನು ಕುಮಾರಸ್ವಾಮಿಯವರು ಕುಳ್ಳ ಎಂದು ಕರೆಯುತ್ತಾರೆ. ನಾನು ಅಷ್ಟೇ ಅವರನ್ನು ಕರಿಯಣ್ಣ ಎಂದು ಕರೆದಿದ್ದೇನೆ. ನಾವಿಬ್ಬರೂ ಸ್ನೇಹಿತರಾಗಿರೊದ್ರಿಂದ ಜಗಳ ಮಾಡ್ತೀವಿ, ಬೈಕೊತೀವಿ ಅದನ್ನೆಲ್ಲಾ ದೊಡ್ಡದು ಮಾಡಿ ವಿರೋಧ ಮಾಡುವವರು ವಿರೋಧ ಮಾಡಿಕೊಳ್ಳಲಿ ಎಂದು ಜಮೀರ್‌ ಅಹ್ಮದ್‌ರವರೇ ಸ್ಪಷ್ಟನೆ ಕೊಟ್ಟಿದ್ದಾರೆ.‌

Leave a Reply

Your email address will not be published. Required fields are marked *