ಮೈಸೂರು: ದಸರಾ ಉದ್ಘಾಟನಾ ಸಮಾರಂಭಕ್ಕೆ ಬೂಕರ್ ಅವಾರ್ಡ್ ಪುರಸ್ಕೃತೆ ಬಾನು ಮುಷ್ತಾಕ್‌ರವರು ಭಾರತಾಂಬೆಯ ಬಗ್ಗೆ ನೀಡಿರುವ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಯದುವೀರ್ ಒತ್ತಾಯಿಸಿದ್ದಾರೆ.
ದಸರಾ ಹಬ್ಬದ ಉದ್ಘಾಟನೆಗೆ ಬಾನು ಮುಷ್ತಾಕ್‌ರವರ ಆಯ್ಕೆಯನ್ನು ಯದುವೀರ್ ಸ್ವಾಗತಿಸಿದರು. ಈ ವಿಚಾರಕ್ಕೆ ತೀವ್ರ ವಿರೋಧ ವ್ಯಕ್ತಾವಗಿರುವ ಕಾರಣ ಕನ್ನಡಾಂಬೆ ಕುರಿತ ಹೇಳಿಕೆಗೆ ಸ್ಪಷ್ಟನೆ ನೀಡಲಿ ಎಂದು ಆಗ್ರಹ ಮಾಡಿದ್ದಾರೆ.

ಈ ಹಿಂದೆ ಬಾನು ಮುಷ್ತಾಕ್‌ರವರು ತಾಯಿ ಭುವನೇಶ್ವರಿ, ಅರಿಶಿಣ,ಕುಂಕುಮ, ಕನ್ನಡ ಭಾಷೆ, ಸಂಸ್ಕೃತಿಯ ಬಗ್ಗೆ ಸಂಕುಚಿತವಾಗಿ ಮಾತನಾಡಿದ್ದರು.ಅವರ ಧರ್ಮದ ಆಚರಣೆಯ ಬಗ್ಗೆ ನಾನು ಮಾತನಾಡುವುದಿಲ್ಲ.ನಮ್ಮ ಧರ್ಮದಲ್ಲಂತು ಮೂರ್ತಿ ಪೂಜೆ ಶ್ರೇಷ್ಟ.ಚಾಮುಂಡಿ ದೇವಿಯನ್ನು ಗೌರವಿಸಿ ಇಲ್ಲಿಗೆ ಬರಬೇಕು. ಮತ್ತು ಅವರ ಹಿಂದಿನ ಹೇಳಿಕೆಗೆ ಸ್ಪಷ್ಟತೆಯನ್ನು ನೀಡಬೇಕು ಎಂದಿದ್ದಾರೆ.
