ಬೆಂಗಳೂರು: ರಾಜ್ಯ ರಾಜಕೀಯ ವಲಯದಲಿ ಸಿಎಂ ಬದಲಾವಣೆಯ ಚರ್ಚೆಗಳು ನಡೆಯುತ್ತಿದ್ದು, ಪರ ವಿರೋಧದ ಚರ್ಚೆಗಳು  ನಡೆಯುತ್ತಿರುವ ಸಮಯದಲ್ಲಿ ಸಂಪುಟ ಪುನರ್‌ಚನೆ ಯಾವಾಗ ಆಗುತ್ತದೆ ಎನ್ನುವ ಚರ್ಚೆಯು ಮುನ್ನಲೆಗೆ ಬಂದಿದೆ.ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ ಯಾರು ಏನೇ ಹೇಳಿದ್ರೂ ಹೈಕಮಾಂಡ್‌ ಹೇಳಿದ ಮೇಲೆ ಪುನಾರಚನೆ ಆಗುತ್ತದೆ ಎಂದು ಹೇಳಿದ್ದಾರೆ.

ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಎಲ್ಲಾ ಶಾಸಕರು ದೆಹಲಿಗೆ ಹೋಗಬಹುದು.ಅಲ್ಲಿಂದ ಬಂದ ನಂತರ ಏನೇ ಹೇಳಿಕೆಯನ್ನು ನೀಡಿದರೂ ಹೈಕಮಾಂಡ್‌ ತೀರ್ಮಾನ ಅಂತಿಮ. ಹೈಕಮಾಂಡ್‌ ಏನು ಹೇಳುತ್ತದೆಯೋ ಅದಕ್ಕೆ ನಾವು ಬದ್ಧ.ಎಲ್ಲಾ ಗೊಂದಲಗಳಿಗೆ ಹೈಕಮಾಂಡ್‌ ಸ್ಪಷ್ಟನೆ ಕೊಡಲಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *