ಬೆಂಗಳೂರು: ಸಿಕೆ ಅಚ್ಚುಕಟ್ಟುವಿನಲ್ಲಿ ನಡೆದ ಬಾಲಕನ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪೊಲೀಸರ ತನಿಖೆಯ ವೇಳೆ ಸ್ಪೋಟಕ ವಿಚಾರವೊಂದು ಬೆಳಕಿಗೆ ಬಂದಿದ್ದು ಆ ಬಾಲಕ ಜಪಾನೀಸ್‌ ಭಾಷೆಯ ವೆಬ್‌ ಸಿರೀಸ್‌ ಕಾರಣದಿಂದ ಎಂಬ ಶಂಕೆ ವ್ಯಕ್ತವಾಗಿದ್ದು, ಈ ವಿಚಾರದ ಬಗ್ಗೆ ಸಿ.ಕೆ.ಅಚ್ಚುಕಟ್ಟು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಬಾಲಕನ ಪೋಷಕರು ಜಾನಪದ ಕಲಾವಿದರಾಗಿದ್ದು, ತಂದೆ ಗಣೇಶ್‌ ಪ್ರಸಾದ್‌, ತಾಯಿ ಸವಿತಾರ ಪುತ್ರ ಗಾಂಧರ್‌ (14) ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಬಾಲಕನ ಆತ್ಮಹತ್ಯೆಗೆ ನಿಕರವಾದ ಕಾರಣವಿನ್ನು ತಿಳಿದುಬಂದಿಲ್ಲ.ಪೊಲೀಸ್‌ ತನಿಖೆಯ ವೇಳೆ ಜಪಾನೀಸ್‌ ವೆಬ್‌ ಸಿರೀಸ್‌ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ. ಆದರೆ ಬಾಲಕನ ರೂಮಿನಲ್ಲಿ ವೆಬ್‌ ಸಿರೀಸ್‌ನಲ್ಲಿರುವ ಪಾತ್ರದ ಚಿತ್ರ ಬರೆದಿದ್ದ ಎನ್ನಲಾಗಿದೆ.

Leave a Reply

Your email address will not be published. Required fields are marked *