ಬೆಂಗಳೂರು: ಕೇರಳ ಸರ್ಕಾರ ಕರ್ನಾಟಕ ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಹೇಳಿದ್ದೇನೆ ಅದನ್ನು ಬಿಟ್ಟು, ಬೇರೆನೆಇಲ್ಲ. ಕೇರಳದ ಜೊತೆ ನಮಗೆ ಭಾಂದವ್ಯವಿದೆ.ಆ ಹೇಳಿಕೆಯನ್ನು ತಿರುಚಿ ಜನರ ದಾರಿ ತಪ್ಪಿಸುವ ಕೆಲಸ ಬೇಡ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮಸವರೊಂದಿಗೆ ಮಾತನಾಡಿದ ಕೇರಳದ ಜೊತೆ ನಮಗೆ ಉತ್ತಮ ಭಾಂದವ್ಯವಿದೆ.ಕೇರಳದ ಜನರು ನನ್ನನ್ನು ಪ್ರೀತಿಸುತ್ತಾರೆ,ಗೌರವಿಸುತ್ತಾರೆ. ಚುನಾವಣಾ ಪ್ರಚಾರಕ್ಕೆ ಹೋಗುತ್ತೇನೆ ಈ ಸಲ ಕೂಡಾನಮ್ಮ ಸರ್ಕಾರ ಅಧಿಕಾರಕ್ಕ ಎಬರುತ್ತದೆ. ಆದ್ದರಿಂದ ಬಿಜೆಪಿಗರು ಜನರ ಮನಸ್ಸನ್ನು ಡೈವರ್ಟ್ ಮಾಡಲು ಜನರ ಮನಸ್ಸಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಮತ್ತು ಕೆನಾಟಕ ಮತ್ತು ಕೇರಳ ನಡುವೆ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮುಂದಿನ ವರ್ಷ ಕೂಡ ಗ್ಯಾರಂಟಿ ಯೋಜನೆಗಳು ಮುಂದುವರೆಯುತ್ತವೆ.ಇನ್ನೂ ನಾಯಕತ್ವದ ಬದಲಾವಣೆಯ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತವನ್ನು ನಡೆಸುತ್ತಿದೆ.ಇನ್ನೂ ಏಳು ವರೆ ವರ್ಷ ನಮ್ಮ ಸರ್ಕಾರ ಆಡಳಿತವನ್ನು ಮಾಡುತ್ತದೆ ಎಂದಿದ್ದಾರೆ.
