ಸಾಮಾಜಿಕ ಜಾಲಾತಾಣದಲ್ಲಿ ಅಶ್ಲೀಲ ಕಮೆಂಟ್ ಮಾಡಿರುವ ವಿಚಾರದ ಕುರಿತು ಸೈಬರ್‌ ಕ್ರೈಂ ಗೆ  ವಿಜಯಲಕ್ಷ್ಮಿ ದರ್ಶನ್‌ ದೂರನ್ನು ದಾಖಲಿಸಿದ್ದರು. ಆದ್ರೆ ಆ ದೂರಿನ ವಿಚಾರದ ಕುರಿತು ಯಾವುದೇ ಅಫ್‌ಡೆಟ್‌ ಸಿಗದ ಕಾರಣ ಪೊಲೀಸರ ನಿರ್ಲಕ್ಷ್ಯದ ಕುರಿತು ಅಸಮಧಾನ ವ್ಯಕ್ತಪಡಿಸಿದ್ದಾರೆ.

“ನಮ್ಮ ದೇಶದಲ್ಲಿ ವ್ಯವಸ್ಥೆ ಮತ್ತು ಕಾನೂನು ಎಲ್ಲರಿಗೂ ಒಂದೇ ಎಂದು ನಾನು ಯಾವಾಗಲೂ ನಂಬಿದ್ದ. ಆದರೆ ಆ ನಂಬಿಕೆಯನ್ನು ಪ್ರಶ್ನೆ ಮಾಡುವ ಸಂದರ್ಭ ಎದುರಾಗಿದೆ ಎಂದು ಹೇಳಿದ್ದಾರೆ.

ಕಿಡಿಗೇಡಿಗಳ ವಿರುದ್ದ ದೂರು ದಾಖಲಿಸಿದ್ದರೂ ಕೂಡಾ ಇಷ್ಟು ನಿರ್ಲಕ್ಷ್ಯವೇಕೆ? ಬೇರೆ ಮಹಿಳೆ ದೂರು ನೀಡಿದರೆ ಒಂದೇ ದಿನದಲ್ಲಿ ಆಕ್ಷನ್‌ ತೆಗೆದುಕೊಳ್ಳಲಾಗುತ್ತದೆ. ನಾನು ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ತುಂಬಾ ಆಶ್ಚರ್ಯಕರವಾದ ಸಂಗತಿ.ನಾನುನೀಡಿರುವ ದೂರು ಮುಖ್ಯವಲ್ಲವಾ? ಅಥವಾ ,ಮಾನ್ಯವೇ ಎಂದು ಪ್ರಶ್ನೆ ಮಾಡಿದ್ದಾರೆ.

ನನ್ನ ವಕೀಲರ ಮೂಲಕ ವಿಚಾರಿಸಿದ ನಂತರವೂ ಕ್ರಮ ಕೈಗೊಳ್ಳದ ಕಾರಣ ನಾನೇ ಖುದ್ದಾಗಿ ಭೇಟಿ ನೀಡಿ ನೆನಪಿಸಬೇಕಾಯಿತು.ಈ ಕೆರ್‌ಲೆಸ್‌ನೆಸ್‌ಗೆ ಕಾರಣವೆನೆಂದು ನನಗೆ ಗೊತ್ತಿಲ್ಲ.

Leave a Reply

Your email address will not be published. Required fields are marked *