ದಾವಣಗೆರೆ: ಸಿಂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಗಳಾಗಿ ಮುಂದುವರೆಯಲಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವರಾದ ಮಹದೇವಪ್ಪ ಹೇಳಿಕೆಯನ್ನು ನೀಡಿದ್ದಾರೆ.

ರಾಜ್ಯ ರಾಜಕೀಯದಲ್ಲಿ ಸಿಎಂ ಕುರ್ಚಿ ವಿಚಾರ ಹಲವಾರು ತಿರುವನ್ನು ಪಡೆದುಕೊಳ್ಳುತ್ತಿದ್ದರೂ ಸಿಎಂ ಮತ್ತು ಡಿಸಿಎಂ ಬ್ರೇಕ್‌ ಪಾಸ್ಟ್‌ ಮೀಟಿಂಗ್‌ ಮಾಡಿದ್ದು, ಈ ಎಲ್ಲಾ ಗೊಂದಲಗಳಿಗೂ ತೆರೆಯನ್ನು ಎಳೆದಿದ್ದಾರೆ ಎಂದರೆ ತಪ್ಪಾಗಲಾರದು.

ಸಿಎಂ ಕುರ್ಚಿ ಕದನ ವಿರಾಮದ ನಂತರ ಪ್ರತಿಕ್ರಿಯಿಸಿದ ಮಹದೇವಪ್ಪ, ಸಿಎಂ ಬದಲಾವಣೆಯ ವಿಚಾರ ನಮ್ಮ ಪಕ್ಷದ ಮುಂದೆ ಇನ್ನೂ ಬಂದಿಲ್ಲ. ಈ ಅಂತೆ ಕಂತೆ ಮಾತುಗಳು ಏಕೆ? ಈ ಅಂತೆಕಂತೆಗಳಿಗೆಲ್ಲಾ ಸಿಎಂ ಡಿಸಿಎಂ ಬ್ರೇಕ್‌ ಪಾಸ್ಟ್‌ ಮೀಟಿಂಗ್‌ನಿಂದ ಉತ್ತರ ಸಿಕ್ಕಿದೆ ಎಂದುಕೊಳ್ಳುತ್ತೇನೆ.

ನಮ್ಮ ಪಕ್ಷದಲ್ಲಿ ಸಿಎಂ ಬದಲಾವಣೆಯ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ನಮ್ಮ ಸರ್ಕಾರ ಸ್ಥಿರವಾಗಿದ್ದು, ಸಿಎಂ ಸಿದ್ದರಾಮಯ್ಯನವರೇ ಮುಂದುವರೆಯಲಿದ್ದಾರೆ. ವಿರೋಧ ಪಕ್ಷದವರು ವಿಧಾನಸೌಧದಲ್ಲಿ ನಮ್ಮ ಪಕ್ಷದ ಶಾಸಕರನ್ನು ಖರೀದಿ ಮಾಡಿದ್ದೇವೆ ಎಂದು ಆರೋಪ ಮಾಡುತ್ತಿದ್ದಾರೆ. ಮೊದಲು ಕೇಂದ್ರ ಸರ್ಕಾರವರು ಹೇಗೆ ಅಧಿಕಾರ ಪಡೆದುಕೊಂಡರು ಎಂಬುದನ್ನು ಬಹಿರಂಗಪಡಿಸಲಿ.

ಕೇಂದ್ರ ಸರ್ಕಾರದವರು ಸ್ವಂತ ಬಲದಿಂದ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರಾ?ನಮಗೆ ಬಾಬಾ ಸಾಹೇಬರು ನೀಡಿರುವ ಸಂವಿಧಾನದ ಬಗ್ಗೆ ನಂಬಿಕೆಯಿದೆ ಮತ್ತು ಅದರ ಬಗ್ಗೆ ನಮಗೆ ತಿಳಿದಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *