ಕಚೇರಿ, ಕಾಲೇಜು ಅಥವಾ ದಿನನಿತ್ಯ ಅತಿ ಕಡಿಮೆ ಸಮಯದಲ್ಲಿ ಮಾಡಿಕೊಳ್ಳಬಹುದಾದ ಸಿಂಪಲ್ ಆಂಡ್ ನ್ಯಾಚುರಲ್ ಮೇಕಪ್ನ ಬಗ್ಗೆ ಮಾಹಿತಿ ಇಲ್ಲಿದೆ.
ಸಿಂಪಲ್ ಮೇಕಪ್ ಮಾಡಲು ಬೇಕಾಗುವ 5 ಮುಖ್ಯ ವಸ್ತುಗಳು ಹೀಗಿವೆ:
ಸಿಂಪಲ್ ಮೇಕಪ್ ಮಾಡಲು ಮಾಯಿಶ್ಚರೈಸರ್,ಬಿಬಿ ಕ್ರೀಮ್ ಅಥವಾ ಸಿಸಿ ಕ್ರೀಮ್,ಕಾಂಪ್ಯಾಕ್ಟ್ ಪೌಡರ್ ,ಕಾಜಲ್ ,ಐಲೈನರ್,ಮತ್ತು ಲಿಪ್ ಸ್ಟಿಕ್ ಇಷ್ಟಿದ್ದರೆ, ಪಟಾಪಟ್ ಎಂದು 5 ನಿಮಿಷದಲ್ಲಿ ಮೇಕಪ್ ಮಾಡಿಕೊಳ್ಳಬಹುದು.

ಮೊದಲನೆಯದಾಗಿ ಮುಖವನ್ನು ಪೇಸ್ ವಾಶ್ ಬಳಸಿ ಚೆನ್ನಾಗಿ ಮುಖ ತೊಳೆದುಕೊಂಡು ನಂತರ ಮಾಯಿಶ್ಚರೈಸರ್ನ್ನು ಬಳಸಬೇಕು ಏಕೆಂದರೆ ನಮ್ಮ ತ್ವಚೆ ಮೃದುವಾಗಿರಲು ಇದು ಸಹಾಯ ಮಾಡುತ್ತದೆ.

ಎರಡನೆಯದಾಗಿ ಯಾವುದೇ ರೀತಿಯ ಹೆವಿ ಫೌಂಡೇಶನ್ ಹಚ್ಚಕೊಳ್ಳದೇ ಬಿಬಿ ಕ್ರೀಮ್ ಅಥವಾ ಸಿಸಿ ಕ್ರೀಮ್ಗಳಲ್ಲಿ ಯಾವುದಾದ್ರೂ ಒಂದನ್ನು ಬಳಸಿದರೆ ಮೇಕಪ್ ಹೆವಿ ಆಗದೇ, ನ್ಯಾಚುರಲ್ ಲುಕ್ ನೀಡುತ್ತದೆ.

ಇನ್ನೂ ಮೂರನೆದಾಗಿ ಕಾಂಪ್ಯಾಕ್ಟ್ ಪೌಡರ್ನ್ನು ಮುಖಕ್ಕೆ ಹಾಕಿಕೊಳ್ಳಬೇಕು ಏಕೆಂದರೆ ಮುಖದ ಮೇಲಿನ ಎಣ್ಣೆ ಅಂಶವನ್ನು ಬ್ಯಾಲೆನ್ಸ್ ಮಾಡುತ್ತದೆ.

ಮುಖದ ಅಂಧಕ್ಕಾಗಿ ಪೌಡರ್, ಕ್ರೀಮ್‌ಗಳಾದರೆ, ಕಣ್ಣಿನ ಸೌಂದರ್ಯಕ್ಕೆ ಕಾಜಲ್ ಮತ್ತು ಐಲೈನರ್ ಹಾಕಿಕೊಂಡರೆ ನಮ್ಮ ಕಣ್ಣುಗಳು ಆಕರ್ಷಕವಾಗಿ ಕಾಣುತ್ತವೆ..

ಇನ್ನೂ ಕೊನೆಯದಾಗಿ ಲೈಟ್ ಕಲರ್ ಲಿಪ್ ಸ್ಟಿಕ್ ಅಥವಾ ಲಿಪ್ ಬಾಮ್ ಹಚ್ಚಿಕೊಂಡರೆ ನಮ್ಮ ನ್ಯಾಚುಲರ್ ಲುಕ್ ಮೇಕಪ್ ಕಂಪ್ಲೀಟ್ ಆಗುತ್ತದೆ.

ನೆನಪಿಡಿ: ಮೇಕಪ್ ಹಚ್ಚುವ ಮುನ್ನ ಮುಖವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮತ್ತು ಮಲಗುವ ಮುನ್ನ ಮೇಕಪ್ ತೆಗೆಯುವುದು ನಿಮ್ಮ ತ್ವಚೆಯ ಆರೋಗ್ಯಕ್ಕೆ ತುಂಬಾ ಮುಖ್ಯ.
